Header Ads
Breaking News

ಪೆರಾಜೆ ಯುವಕ‌‌ ಮಂಡಲದ ಆಶ್ರಯದಲ್ಲಿ ಪುರುಷರ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ

ಬಂಟ್ವಾಳ ತಾಲೂಕಿನ ಪೆರಾಜೆ ಶಾಲಾ ವಠಾರದಲ್ಲಿ ಪೆರಾಜೆ ಯುವಕ‌‌ ಮಂಡಲದ ಆಶ್ರಯದಲ್ಲಿ ಪುರುಷರ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಿತು. ಪೆರಾಜೆ ಗುತ್ತುವಿನ ಪದ್ಮಾವತಿ ಜಗನ್ನಾಥ ಆಳ್ವ ಸಮಾರಂಭ ಉದ್ಘಾಟಿಸಿದರು. ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ಜಗನ್ನಾಥ್ ಚೌಟ, ಮಂಜುಳಾ ಮಾಧವ ಮಾನೆ, ಮಂಜುಳಾ ಕುಶಾಲ ಎಂ, ಪುಷ್ಪ ವಿಶ್ವನಾಥ್ ಪೂಜಾರಿ, ಪತ್ರಕರ್ತ ಶಂಶೀರ್ ಬುಡೋಳಿ, ಡಾ.ಶ್ರೀನಾಥ್ ಆಳ್ವ, ಗಂಗಾಧರ್ ರೈ ಶೇರಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಬಡ್ಡಿ ಕ್ರೀಢೆಯಲ್ಲಿ ಸಾಧನೆ ಮಾಡಿದ ಶಶಿಧರ್ ಸೇರಾ, ಹಬೀಬ್ ಮಾಣಿ, ಉಮೇಶ್ ಮುಳಿತ್ತಪಡ್ಪು ಇವರನ್ನು ಸನ್ಮಾನಿಸಲಾಯಿತು. ಎಸ್ ವಿಎಸ್ ಉಳ್ಳಾಲ, ಮಾಲಿಂಗೇಶ್ವರ ಕುಂಜತ್ತೂರು, ಎನ್ ಎಚ್ ಬಂಗೇರಕಟ್ಟೆ ಹಾಗೂ ಮಾಣಿ ತಂಡಗಳು ಬಹುಮಾನ ಗಳಿಸಿದವು. ಪೆರಾಜೆ ಯುವಕ ಮಂಡಲದ ನೂತನ ಕಟ್ಟಡದ ಸಹಾಯಾರ್ಥವಾಗಿ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ಈ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು.

Related posts

Leave a Reply

Your email address will not be published. Required fields are marked *