Header Ads
Header Ads
Breaking News

ಪೆರಿಯಡ್ಕದಲ್ಲಿರುವ ಸರ್ವೋದಯ ವಿದ್ಯಾಸಂಸ್ಥೆ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ಗೆ ಹಸ್ತಾಂತರ : ಡಾ. ನಿರ್ಮಲಾನಂದನಾಥ ಸ್ವಾಮೀಜಿಯರಿಂದ ಆರ್ಶೀವಚನ

ಉಪ್ಪಿನಂಗಡಿಯ ಪೆರಿಯಡ್ಕದಲ್ಲಿನ ಸರ್ವೋದಯ ವಿದ್ಯಾಸಂಸ್ಥೆಯನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಅರ್ಶೀವಚನ ನೀಡಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್ಶೀವಚನ ನೀಡಿದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು, ಪಟ್ಟಣಗಳಲ್ಲಿ ದೊರಕುವ ಗುಣ ಮಟ್ಟದ ಶಿಕ್ಷಣ ಹಳ್ಳಿಗಳಲ್ಲಿಯೂ ದೊರಕುವಂತಾಗಿ ಸಮಾಜದ ಎಲ್ಲಾ ವರ್ಗದ ಜನತೆಯೂ ಉನ್ನತಿಯ ಬೆಳಕನ್ನು ಕಾಣುವಂತಾಗಬೇಕು ಎಂದು ತಿಳಿಸಿದರು.ಮಂಗಳೂರು ಶಾಖಾ ಮಠದ ಶ್ರೀ ಶ್ರೀಧರ್ಮಪಾಲನಾಥ ಸ್ವಾಮೀಜಿಯವರು ಅಶೀರ್ವಚನ ನೀಡಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ೪೮೧ನೇ ವಿದ್ಯಾ ಸಂಸ್ಥೆಯಾಗಿ ಪೆರಿಯಡ್ಕದ ಸರ್ವೋದಯ ವಿದ್ಯಾಸಂಸ್ಥೆ ದಾಖಲಾಗಿದೆ. ಶಿಕ್ಷಣಸಂಸ್ಥೆಯ ಹಸ್ತಾಂತರ ಎಂದರೆ ಭಕ್ತರು ಮತ್ತು ಮಠದ ನಡುವಿನ ಭಾಂಧವ್ಯ ಬೆಸೆಯುವ ಕಾರ್ಯಕ್ರಮವಾಗಿದೆ. ಸಂಸ್ಕಾರ – ಸಂಸ್ಕೃತಿ ಯು ಶಿಕ್ಷಣದೊಂದಿಗೆ ಸಂಯೋಜನೆಗೊಂಡರೆ ಉತ್ತಮ ವ್ಯಕ್ತಿ ನಿರ್ಮಾಣ ಸಾಧ್ಯವಾಗುವುದು. ತನ್ಮೂಲಕ ಉತ್ತಮ ಸಮಾಜ ನಿರ್ಮಾಣವಾಗುವ್ಯದೆಂದು ಅವರು ತಿಳಿಸಿದರು.ಇದೇ ಸಂಧರ್ಭದಲ್ಲಿ ಸಮಾಜದ ಮುಂದಾಳುಗಳಾದ ನಳಿನೀ ಲೋಕಪ್ಪ ಗೌಡ ದಂಪತಿಗಳು ಈ ವಿದ್ಯಾ ಸಂಸ್ಥೆಗೆ 20 ಲಕ್ಷ ರೂ ಕೊಡುಗೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥೇಶ್ವರ ಸ್ವಾಮೀಜಿಯವರು, ಶಾಸಕ ಸಂಜೀವ ಮಠಂದೂರು, ಸರ್ವೋದಯ ಪ್ರೌಢ ಶಾಲಾ ಸಂಚಾಲಕ ಸುಂದರ ಗೌಡ, ಉಪ್ಪಿನಂಗಡಿ ಶ್ರೀ ಸ್ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅಲಿಮಾರ ರಘುನಾಥ ರೈ, ಉಪ್ಪಿನಂಗಡಿ ಶ್ರೀರಾಮ ಶಾಲಾ ಅಧ್ಯಕ್ಷ ಕರುಣಾಕರ ಸುವರ್ಣ, ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾಜಿ ಸಚಿವ ಗಂಗಾಧರ ಗೌಡ , ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಎಚ್ ಡಿ ಶಿವರಾಮ ಗೌಡ, ಮೋಹನ್ ಗೌಡ ಇಡ್ಯಡ್ಕ, ಜಯಪ್ರಕಾಶ್ ಗೌಡ ಮಂಡ್ಯ, ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ ಎಸ್ , ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *