Header Ads
Header Ads
Breaking News

ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ : ಪುನಃಪ್ರತಿಷ್ಠಾಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ

ವಿಟ್ಲ ಸಮೀಪದ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವಕ್ಕೆ ಚಾಲನೆ ಅದ್ಧೂರಿಯಾಗಿ ನೀಡಲಾಯಿತು.ಬೆಳಗ್ಗೆ ಪೆರುವಾಯಿ ಶ್ರೀ ರಾಜರಾಜೇಶ್ವರೀ ಭಜನಾ ಮಂದಿರದಿಂದ ಹೊರಟ ಭಜನಾ ಸಂಕೀರ್ತನೆಯನ್ನು ರಾಮಕೃಷ್ಣ ಕಾಟುಕುಕ್ಕೆ ಉದ್ಘಾಟಿಸಿದರು. ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆಗೆ ಗಣುಮೂಲೆ ಕೆ. ಜಿ. ಸುಬ್ರಹ್ಮಣ್ಯ ಭಟ್ ಚಾಲನೆ ನೀಡಿದರು. ವೈದಿಕರ ಸಹಿತ ತಂತ್ರಿಗಳ ಆಗಮನವಾಗಿ ಧಾಮಿರ್ಕ ವಿಧಿವಿಧಾನಗಳನ್ನು ಆರಂಭಿಸಿದರು.

ರಾತ್ರಿ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶಿರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿಯವರು ಊರಿನ ಜನರು ಹೇಗಿರುತ್ತಾರೆ ಎನ್ನುವುದಕ್ಕೆ ಆ ಗ್ರಾಮದ ದೇವಸ್ಥಾನವನ್ನು ನೊಡಬೇಕು. ಸಮಾಜದಲ್ಲಿ ಒಳ್ಳೆಯ ಗುಣ ಬೆಳೆಯಬೇಕಾದರೆ ಯುವ ಶಕ್ತಿ ಎಚ್ಚೆತ್ತುಕೊಳ್ಳಬೇಕು. ಯುವ ಶಕ್ತಿ ಜಾಗ್ರತವಾದರೆ ರಾಷ್ಟ್ರವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಬಹುದು. ದೇವಾಲಯ ಜೀರ್ಣೋದ್ಧಾರಗೊಂಡು ಎಲ್ಲಾ ಕಾರ್ಯಗಳು ಸಕಾಲದಲ್ಲಿ ನಡೆದುಕೊಂಡು ಇದ್ದರೆ ಗ್ರಾಮಕ್ಕೆ ಸುಭಿಕ್ಷೆ. ಭಾರತ ಸಂಸ್ಕೃತಿಯ ತಿರುಳೆಂದರೆ ಅದು ಕೃಷಿ ಸಂಸ್ಕೃತಿ ಎಂದು ಹೇಳಿದರು.

ನಾರ್ತ್ ಮಲಬಾರ್ ಗ್ರಾಮೀಣ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಶಿವರಾಮ ಶೆಟ್ಟಿ ಪೇರಡ್ಕ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಪೆರುವಾಯಿ ಶ್ರೀ ಮೂವರು ದೈವಂಗಳು ಪಂಜುರ್ಲಿ, ಪಿಲಿಚಾಮುಂಡಿ ಕ್ಷೇತ್ರದ ಗುರಿಕಾರರಾದ ಕೆ.ಜಿ ಸುಬ್ರಹ್ಮಣ್ಯ ಭಟ್, ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಸಹಕಾರ ಭಾರತಿಯ ಜಿಲ್ಲಾಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಮಂಗಳೂರಿನ ಕೆನರಾ ಕಾಲೇಜಿನ ನಿವೃತ ಪಿ.ಡಿ ರತ್ನಾಕರ ರೈ ಪೇರಡ್ಕ, ಉದ್ಯಮಿ ಸುಧಾಕರ ಆಳ್ವ ಸಂಗಬೆಟ್ಟು, ವಿಜಯ ರೈ ನೆಲ್ಯಾಜೆ, ಪೆರುವಾಯಿ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕರಾದ ಕುಂಞಣ್ಣ ನಾಯ್ಕ, ಪುತ್ತೂರು ಕುಂಬಾರರ ಗುಡಿ ಕೈಗಾರಿಕೆ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ವಕೀಲರಾಗಿರುವ ಬಾಸ್ಕರ ಪೆರುವಾಯಿ, ನೆಲ್ಯಾಡಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರವೀಂದ್ರ ಪಡುಬೆಟ್ಟು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ರತ್ನಾಕರ ಶೆಟ್ಟಿ ಕಂಬಳಕೋಡಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ನಾರಾಯಣ ರೈ ಅಡಿವಾಯಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ನಾಗೇಶ್ ಮಾಸ್ಟರ್, ಆಡಳಿತ ಮುಕ್ತೇಸರರಾದ ಕಲೈತ್ತಿಮಾರು ವೆಂಕಪ್ಪ ಮಾರ್ಲ, ಸಚಿನ್ ಅಡ್ವಾಯಿ, . ಸಮಿತಿ ಸದಸ್ಯರಾದ ಬಾಲಕೃಷ್ಣ ರೈ, ಪ್ರಸಾದ್ ಭಂಡಾರಿ ದಡ್ಡಂಗಡಿ, ಮಧುಸೂದನ ಪೂಜಾರಿ ಕುಂಬಳಕೋಡಿ ಉಪಸ್ಥಿತರಿದ್ದರು.

Related posts

Leave a Reply