Header Ads
Header Ads
Breaking News

ಪೆರ್ಡೂರು :ಪರವಾನಿಗೆ ಇಲ್ಲದೆ ಅಕ್ಕಿ ಮೂಟೆ ಸಾಗಾಟ-ಡಿಸಿಐಬಿ ಪೊಲೀಸರಿಂದ ಭಾರೀ ಪ್ರಮಾಣದ ಅಕ್ಕಿ ವಶ

ಪರವಾನಗಿ ಇಲ್ಲದ ಬೃಹತ್ ಪ್ರಮಾಣದ ಅಕ್ಕಿ ಮೂಟೆಗಳನ್ನ ಡಿಸಿಐಬಿ ಪೊಲೀಸರು ವಶಕ್ಕೆ ಪಡೆದು ಓರ್ವನನ್ನ ವಶಕ್ಕೆ ಪಡೆದಿದ್ದಾರೆ. ಉಡುಪಿ ಜಿಲ್ಲೆಯ ಹಿರಿಯಡ್ಕ ಹಾಗೂ ಪೆರ್ಡೂರು ಗ್ರಾಮದಲ್ಲಿ ದಾಳಿ ನಡೆಸಿದ ಪೊಲೀಸರು 380 ಚೀಲ ಅಕ್ಕಿ, ಬೊಲೆರೋ ಪಿಕಪ್ ಹಾಗೂ ಲಾರಿಯನ್ನ ವಶಕ್ಕೆ ಪಡೆದು ಲಾರಿ ಚಾಲಕನನ್ನ ಬಂಧಿಸಲಾಗಿದೆ.

ಉಡುಪಿಯ ಹಿರಿಯಡ್ಕ ಪೇಟೆಯಲ್ಲಿ ಅಕ್ರಮ ವಾಗಿ 10ಟನ್ ಅಕ್ಕಿಯನ್ನ ಸಾಗಾಟ ಮಾಡುತ್ತಿದ್ದ ಲಾರಿಯನ್ನ ಹಿಡಿದ ಬಳಿಕ ಪೆರ್ಡೂರಿನ ರಥಬೀದಿಯಲ್ಲಿ ರಾಜೇಶ್ ನಾಯಕ್ ಎಂಬವರ ಗೋದಾಮಿನಲ್ಲಿದ್ದ 130ಚೀಲ ಅಕ್ಕಿ ಹಾಗೂ ಎಫ್ ಸಿಐ ಪಂಜಾಬ್ ಎಂದು ಬರೆದಿದ್ದ 400 ಖಾಲಿ ಗೋಣಿ ಚೀಲಗಳನ್ನ, ಗೋದಾಮಿನ ಬಳಿ ನಿಲ್ಲಿಸಿದ್ದ ಪಿಕಪ್ ವಾಹನದಲ್ಲಿ ಇಟ್ಟಿದ್ದ ೫೦ಅಕ್ಕಿ ಮೂಟೆಗಳನ್ನ ಕೂಡ ವಶಕ್ಕೆ ಪಡೆಯಲಾಗಿದೆ.ಈ ವೇಳೆ ಲಾರಿ ಚಾಲಕ ಶಫೀಕ್ ನನ್ನ ಬಂಧಿಸುವ ವೇಳೆ ಗೋದಾಮಿನ ಮಾಲಿಕ ರಾಜೇಶ್ ನಾಯಕ್ ಪರಾರಿಯಾಗಿದ್ದಾನೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *