Header Ads
Header Ads
Header Ads
Breaking News

ಪೆರ್ಲ ಸರಕಾರಿ ಶಾಲಾ ಬಾವಿಗೆ ವಿಷ ಬೆರೆಸಿದ ಪ್ರಕರಣ : ಆರೋಪಿಗಳ ಶೀಘ್ರ ಪತ್ತೆಗಾಗಿ ಸಾಮೂಹಿಕ ಪ್ರಾರ್ಥನೆ

ಪೆರ್ಲ ಸರಕಾರಿ ಶಾಲಾ ಬಾವಿಗೆ ವಿಷ ಬೆರೆಸಿದ ಪ್ರಕರಣದ ಆರೋಪಿಗಳ ಶೀಘ್ರ ಪತ್ತೆಗಾಗಿ ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಶಿಬಾಜೆ ಗ್ರಾಮಸ್ಥರು ಪೆರ್ಲ ಶಾಲೆಯಿಂದ ಶಿಬಾಜೆ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಪಾದಯಾತ್ರೆಯಲ್ಲಿ ತೆರಳಿ ಶ್ರೀ ದೇವರಿಗೆ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು.ಪಾದಯಾತ್ರೆಯ ಬಳಿಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಹರೀಶ್ ಪೂಂಜ ಮಾತನಾಡಿ ಶಾಲಾ ಮಕ್ಕಳ ಪೋಷಕರ ವಿನಂತಿಯಂತೆ ಶಾಲೆಗೆ ಸಿಸಿ ಕ್ಯಾಮೆರಾ ನೀಡಿದ್ದೇನೆ. ಬಾವಿಯ ನೀರು ಶುದ್ದೀಕರಣಗೊಳಿಸುವ ತನಕ ಶಾಲಾ ಮಕ್ಕಳಿಗೆ ಕುಡಿಯುವ ನೀರಿಗೆ ಊರವರ ಕೋರಿಕೆಯಂತೆ ಫಿಲ್ಟರ್ ಮಾಡಿದ ನೀರಿನ ವ್ಯವಸ್ಥೆಯನ್ನು ಮಾಡಲಿದ್ದೇನೆ. ಮೊನ್ನೆಯ ಘಟನೆಯಲ್ಲಿ ಆಸ್ಪತ್ರೆಗೆ ದಾಖಲುಗೊಂಡ ಎಲ್ಲ ಮಕ್ಕಳ ಚಿಕಿತ್ಸಾ ವೆಚ್ಚವನ್ನು ತಾನು ಭರಿಸಿದ್ದು, ಇನ್ನೂ ಮುಂದಕ್ಕೆ ಯಾವುದಾದರೂ ಮಕ್ಕಳಿಗೆ ಚಿಕಿತ್ಸೆಗೆ ಹೋಗಬೇಕಾದಲ್ಲಿ ಆಸ್ಪತ್ರೆಯ ಖರ್ಚನ್ನು ತಾನು ಕೊಡುವುದಾಗಿ ಹೇಳಿದರು. ಅಸ್ವಸ್ಥಗೊಂಡಿದ್ದ ಎಂಟು ಬಾಲಕರ ಮನೆಯವರಿಗೆ ಪರಿಹಾರ ರೂಪದಲ್ಲಿ ತಲಾ ಹತ್ತು ಸಾವಿರದಂತೆ ಎಂಭತ್ತು ಸಾವಿರ ರೂಪಾಯಿ ಗಳನ್ನು ನೀಡುವುದಾಗಿ ಶಾಸಕರು ಈ ಸಂದರ್ಭ ತಿಳಿಸಿದರು.

ಶಿಬಾಜೆಯ ಇನ್ನೊಂದು ಸರಕಾರಿ ಶಾಲೆಗೂ ಸಿಸಿ ಕ್ಯಾಮೆರಾದ ಅಳವಡಿಕೆಯ ಬೇಡಿಕೆಯನ್ನು ಗ್ರಾಮಸ್ಥರು ನೀಡಿದ್ದು ಈ ಶಾಲೆಗೂ ಸಿಸಿ ಕ್ಯಾಮೆರಾ ಅಳವಡಿಸಲು ತಾನು ಅನುದಾನ ನೀಡುವುದಾಗಿ ನುಡಿದರು. ಅಂತೆಯೇ ಶಾಲಾ ಮಕ್ಕಳ ಕಾಳಜಿಯ ಕುರಿತಂತೆ ಪೋಲೀಸ್ ಇಲಾಖೆಯ ವೃತ್ತ ನಿರೀಕ್ಷಕರ ಉಪಸ್ಥಿತಿಯಲ್ಲಿ ಪೆರ್ಲ ಶಾಲೆಯಲ್ಲಿ ಪೋಷಕರ ಸಭೆ ನಡೆಸಲಿದ್ದು ನಾಳೆಯಿಂದ ಮಕ್ಕಳ ಭವಿಷ್ಯದ ಚಿಂತನೆಯಲ್ಲಿ ಎಲ್ಲ ಪೋಷಕರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೊಡಬೇಕಾಗಿ ಗ್ರಾಮಸ್ಥರಲ್ಲಿ ವಿನಂತಿಸಿದರು. ಶಿಬಾಜೆ ದೇವಸ್ಥಾನದ ಮಾಜಿ ಮೊಕ್ತೇಸರ ಸಚ್ಚಿದಾನಂದ ಭಟ್, ಧರ್ಮಸ್ಥಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೊರಗಪ್ಪ ನಾಯ್ಕ್ ಉಪಸ್ಥಿತರಿದ್ದರು. ಕೃಷ್ಣಪ್ಪ ಬೇಂಗಳ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *