Header Ads
Header Ads
Breaking News

ಪೆರ್ವಾಜೆ ದೇವಸ್ಥಾನದ ಆಡಳಿತಾಧಿಕಾರಿ ಬದಲಾವಣೆ ವಿಚಾರ: ಯುವಕ ಮಂಡಲದ ಸದಸ್ಯರಿ0ದ ಪ್ರತಿಭಟನೆ

ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲು ಬಂದ ಪ್ರಶಾಂತ್ ಅವರನ್ನು ಅಧಿಕಾರ ವಹಿಸಿಕೊಳ್ಳದಂತೆ ಊರವರು ಪ್ರತಿಭಟಿಸಿದ ಘಟನೆ ನಡೆದಿದೆ. ಪೆರ್ವಾಜೆ ದೇವಸ್ಥಾನದಲ್ಲಿ ಈಗಿರುವ ಆಡಳಿತಾಧಿಕಾರಿ ಹರಿಪ್ರಸಾದ್ ಭಟ್ ಅವರು ಅತ್ಯಂತ ದಕ್ಷತೆ, ಪ್ರಾಮಾಣಿಕತೆಯಿಂದ ದೇಗುಲದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ಹಿಂದೆ ದೇವಸ್ಥಾನದ ಜೀರ್ಣೋದ್ಧಾರದ ವೇಳೆ ವ್ಯವಸ್ಥಾಪನಾ ಸಮಿತಿ ಅವ್ಯವಹಾರ ನಡೆಸಿದ್ದು, ಅದನ್ನು ಬಯಲಿಗೆಳೆದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಯವರಿಗೆ ಹರಿಪ್ರಸಾದ್ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ಹರಿಪ್ರಸಾದ್ ಅವರನ್ನು ವರ್ಗಾವಣೆಗೊಳಿಸುವ ಹುನ್ನಾರ ನಡೆದಿದೆ ಎಂದು ಪ್ರಭಾಕರ ಬಂಗೇರಾ ಆರೋಪಿಸಿದರು.

ಜೀರ್ಣೋದ್ಧಾರದ ವೇಳೆ ಬೃಹತ್ ಪ್ರಮಾಣದಲ್ಲಿ ಅವ್ಯವಹಾರ ನಡೆದಿದ್ದು, ಈ ಕುರಿತು ಧಾರ್ಮಿಕ ದತ್ತಿ ಸಹಾಯಕ ಆಯುಕ್ತರು ತನಿಖೆ ನಡೆಸುವಂತೆ ಅಪರ ಜಿಲ್ಲಾಧಿಕಾರಿಯವರು ಕಳೆದ ವರ್ಷವೇ ಆದೇಶಿಸಿದ್ದರೂ ತನಿಖೆ ನಡೆಸದಿರುವ ಬಗ್ಗೆಯೂ ನೆರೆದವರು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಗುತ್ತು ಮನೆತನದ ವೆಂಕಟರಾಜ್, ರವೀಂದ್ರ ಹೆಗ್ಡೆ, ಆದಿರಾಜ ಅಜ್ರಿ, ಸುಬಿತ್ ಕುಮಾರ್ ಎನ್.ಆರ್. ಮಹಾಲಿಂಗೇಶ್ವರ ಯುವಕ ಮಂಡಲದ ಸದಸ್ಯರು ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *