Header Ads
Header Ads
Header Ads
Breaking News

ಪೇಜಾವರ ಮಠಾಧೀಶ ಆಸ್ಪತ್ರೆಗೆ ದಾಖಲು : ಅನಗತ್ಯ ವದಂತಿಗೆ ಕಿವಿಗೊಡಬೇಡಿ ಅಂದ ಮಠದ ಆಪ್ತರು

ದೇಶದ ಅತ್ಯಂತ ಪ್ರಭಾವಿ ಮಠಾದೀಶರಾಗಿರುವ ಪೇಜಾವರ ಶ್ರೀ ಗಳು ಉಸಿರಾಟದ ತೊಂದರೆಯಿಂದ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇತ್ತ ದೇಶದಾದ್ಯಂತ ಶ್ರೀಗಳ ಚೇತರಿಕೆಗೆ ಭಜನೆ, ಪಾರಾಯಣಗಳು ಪ್ರಾರ್ಥನೆಗಳು ನಡೆಯುತ್ತಿದೆ.

 ಧಾರ್ಮಿಕ , ಸಾಮಾಜಿಕ ಹಾಗೂ ಆದ್ಯಾತ್ಮಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಉಸಿರಾಟದ ತೊಂದರೆಯಿಂದ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ನಿನ್ನೆ ತಡರಾತ್ರಿ ಸೋಡಿಯಂ ಕೊರತೆಯಿಂದ ಉಸಿರಾಟದ ಸಮಸ್ಯೆ ಉಂಟಾಗಿದ್ದು ಮೊದಲು ನಗರದ ಆದರ್ಶ ಆಸ್ಪತ್ರೆಗೆ ಪೇಜಾವರ ಶ್ರೀಗಳನ್ನು ದಾಖಲಿಸಲಾಯಿತು. ರಕ್ತದ ಚಲನೆಯಲ್ಲಿ ದಿಢೀರ್ ವ್ಯತ್ಯಾಸದ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ಶ್ರೀಗಳನ್ನು ಕೆಎಂಸಿಗೆ ದಾಖಲು ಮಾಡಲಾಯಿತು. ಶ್ರೀಗಳಿಗೆ ನ್ಯುಮೇನಿಯಾ ಸಮಸ್ಯೆ ಇದ್ದದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ವೆಂಟಿಲೇಟರ್ ಮೂಲಕ ಕೃತಕ ಉಸಿರಾಟ ವ್ಯವಸ್ಥೆ ಮಾಡಿದ್ದಾರೆ. ದೇಹ ಸ್ಥಿತಿ ಗಂಬೀರವಾಗಿದ್ದರೂ ವೈದ್ಯೆ ಡಾ. ಸುಧಾ ವಿದ್ಯಾಸಾಗರ್ ಅವರಿಂದ ಚಿಕಿತ್ಸೆ ಮುಂದುವರೆದಿದೆ.ಶ್ರೀಗಳು ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ ಎಂಬುದನ್ನು ವೈದ್ಯರು ತಿಳಿಸಿದ್ದಾರೆ.ಇನ್ನು ವದಂತಿಗಳಿಗೆ ಕಿವಿಕೊಡಬೇಡಿ ಅಂತ ಮಠದ ಆಪ್ತ ವಾಸುದೇವ್ ಭಟ್ ಮನವಿ ಮಾಡಿದ್ದಾರೆ.

 ಪೇಜಾವರ ಶ್ರೀಗಳ ಆರೋಗ್ಯಕ್ಕಾಗಿ ವೈದ್ಯರು ಶ್ರಮ ಪಡುತ್ತಿದ್ದಾರೆ. ಇತ್ತ ಮಠಕ್ಕೆ ಸಂಬಂಧಪಟ್ಟ ಎಲ್ಲಾ ಶಾಖೆಗಳಲ್ಲಿ ಶ್ರೀಗಳ ಆರೋಗ್ಯ ವೃದ್ದಿಗೆ ಪ್ರಾರ್ಥಿಸಿ ಭಜನೆ ಪಾರಾಯಣ ಪ್ರಾರ್ಥನೆಗಳು ನಡೆಯುತ್ತಿದೆ. ಆಸ್ಪತ್ರೆಗೆ ಈಗಾಗಲೇ ಹಲವಾರು ಗಣ್ಯರು ಭೇಟಿ ನೀಡಿದ್ದಾರೆ. ಪುತ್ತಿಗೆ ಮಠಾದೀಶ ಸುಗುಣೇಂದ್ರ ತೀರ್ಥ ಶ್ರೀಪಾದರು, ಸುಭ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಎಡನೀರು ಮಠದ ಕೇಶವಾನಂದ ಭಾರತೀ ಸ್ವಾಮೀಜಿ , ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಜಿಲ್ಲಾಧಿಕಾರಿ ಜಿ.ಜಗದೀಶ್ ಸೇರಿದಂತೆ ಹಲವಾರು ಗಣ್ಯರು ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸುತ್ತಿದ್ದಾರೆ. ಮಾತ್ರವಲ್ಲದೇ ಶ್ರೀಗಳು ಶ್ರೀಘ್ರ ಗುಣಮುಖರಾಗಲಿ ಅಂತ ಪ್ರಾರ್ಥಿಸುತ್ತಿದ್ದಾರೆ.

ಪೇಜಾವರ ಶ್ರೀಗಳು ನಿನ್ನೆ ೪ ಧಾರ್ಮಿಕ ಕಾರ್ಯಕ್ರಮದಲ್ಲಿ ಲವಲವಿಕೆಯಲ್ಲಿ ಪಾಲ್ಗೊಂಡಿದ್ದು ಸಂಜೆ ಹೊತ್ತಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ೯೦ ವರ್ಷದ ಶ್ರೀಗಳು ಯುವಕರಂತೆ ಓಡಾಡಿಕೊಂಡಿದ್ದರು. ಮಾತ್ರವಲ್ಲದೇ ದಿನವೊಂದಕ್ಕೆ 6ಕ್ಕೂ ಮಿಕ್ಕಿ ಕಾರ್ಯಕ್ರಮಗಳು ದೆಹಲಿ ಸೇರಿದಂತೆ ಬೇರೆ ಬೇರೆ ರಾಜ್ಯದ ಪ್ರವಾಸದಲ್ಲಿ ನಿರತರಾಗಿದ್ದರು. ಇದೀಗ ಶ್ರೀಗಳ ಅನಾರೋಗ್ಯ ಮಠದ ಆಪ್ತರಿಗೆ ಆತಂಕಕ್ಕೆ ಕಾರಣವಾಗಿದೆ. ನಾಳೆ ಸಿಎಂ ಯಡಿಯೂರಪ್ಪ ಸೇರಿದಂತೆ ಕೇಂದ್ರ ಸಚಿವರು ಶ್ರೀಗಳ ಆರೋಗ್ಯ ವಿಚಾರಿಸಲು ಉಡುಪಿಯ ಮಣಿಪಾಲಕ್ಕೆ ಆಗಮಿಸುವ ಸಾಧ್ಯತೆ ಇದೆ.

 

Related posts

Leave a Reply

Your email address will not be published. Required fields are marked *