Header Ads
Header Ads
Header Ads
Breaking News

ಪೇಜಾವರ ಶ್ರೀಗಳಿಗೆ ಅನಾರೋಗ್ಯ

ಜನವರಿ 17ರಂದು ತನ್ನ ಐತಿಹಾಸಿಕ ಪರ್ಯಾಯವನ್ನು ಮುಗಿಸಿದ್ದ ಪೇಜಾವರ ಶ್ರೀಗಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಪರ್ಯಾಯ ಮುಗಿದ ಬಳಿಕ ಪೇಜಾವರ ಶ್ರೀಗಳು ದಣಿವರಿಯದ ಸಂಚಾರದಲ್ಲಿ ತೊಡಗಿದ್ದರು. ಮಂತ್ರಾಲಯದಿಂದ ಹೈದರಬಾದ್ ಮಾರ್ಗದಲ್ಲಿ ಪೇಜಾವರ ಶ್ರೀಗಳಿಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿದ್ದು ವಿಮಾನದ ಮೂಲಕ ಉಡುಪಿಗೆ ವಾಪಾಸಾಗಿದ್ದಾರೆ.

ತನ್ನ ಪರ್ಯಾಯ ಮಹೋತ್ಸವದ ಬಳಿಕ ವಿವಿಧ ಕಡೆ ದಣಿವರಿಯದೇ ಸಂಚಾರದಲ್ಲಿ ತೊಡಗಿದ್ದ ಪೇಜಾವರ ಶ್ರೀಗಳಿಗೆ ಅನಾರೋಗ್ಯ ಭಾಧಿಸಿದೆ. ಈಗಾಗಲೇ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪೇಜಾವರ ಶ್ರೀಗಳಿಗೆ ವೈದ್ಯರು ವಿಶ್ರಾಂತಿ ಸೂಚಿಸಿದ್ದರು. ತನ್ನ ಪರ್ಯಾಯದ ಬಳಿಕ ಸೋಂದ, ಗದಗ, ಮಂತ್ರಾಲಯಕ್ಕೆ ಸ್ವಾಮೀಜಿ ತೆರಳಿದ್ದರು. ವಾಪಾಸ್ ಬರುವಾಗ ಮಂತ್ರಾಲಯ -ಹೈದರಾಬಾದ್ ಮಾರ್ಗದಲ್ಲಿ ಕರ್ನೂಲ್ ಎಂಬಲ್ಲಿ ಕಾರಿಗೆ ಬ್ರೇಕ್ ಹಾಕುವ ಸಂದರ್ಭದಲ್ಲಿ ಬೆನ್ನು ನೋವು  ಉಂಟಾಗಿದ್ದು ಬಳಿಕ ನಡೆಯಲು ಆಗದ ಶ್ರೀಗಳು ವಿಮಾನದ ಮೂಲಕ ಉಡುಪಿಗೆ ವಾಪಾಸಾಗಿದ್ದರು. ಉಡುಪಿಗೆ ಬಂದ ಬಳಿಕ ಹೈಟೆಕ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟಿರುವ ಸ್ವಾಮೀಜಿಗೆ ವೈದ್ಯರು ಸಿಟಿ ಸ್ಕ್ಯಾನ್ ನಡೆಸಿ 15 ದಿನಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ನನಗೆ ಬೆನ್ನು ಬಹಳ ನೋವಿದೆ
ಸ್ವಲ್ಪವೂ ನಡೆದಾಡಲು ಆಗುತ್ತಿಲ್ಲ. ಮಂತ್ರಾಲಯದಿಂದ ರಾತ್ರಿ ಹೊರಟಿದ್ದೆವು.ರಸ್ತೆ ಮಧ್ಯೆ ಕಾರು ಏಕಾಯೇಕಿ ಹಾರಿತು.ಈ ಸಂದರ್ಭ ಬೆನ್ನಿಗೆ ಏಟು ಬಿದ್ದಿದೆ 15ದಿನ ನಾನು ಎಲ್ಲೂ ಓಡಾಡುವುದಿಲ್ಲ.ಸಂಪೂರ್ಣ ವಿಶ್ರಾಂತಿ ಪಡೆಯಲು ವೈದ್ಯರು ಸೂಚನೆ ನೀಡಿದ್ದಾರೆ ಅಂತ ಪೇಜಾವರ ಶ್ರೀಗಳು ತಿಳಿಸಿದ್ದಾರೆ.

Related posts

Leave a Reply