Header Ads
Breaking News

ಪೇಜಾವರ ಶ್ರೀಗಳು ರಾಮ ಮಂದಿರ ನಿರ್ಮಾಣವಾಗುವವರೆಗೆ ಅವರು ಬದುಕಿರಬೇಕು : ಉಡುಪಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ

ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ಬಿಎಸ್‌ವೈ ಅವರು, ಪೇಜಾವರ ಶ್ರೀ ಗುಣಮುಖರಾಗಉ ಪ್ರಾರ್ಥಿಸಬೇಕು. ಶ್ರೀಗಳು ನಿನ್ನೆಯಿಂದ ಇಂದು ಸುಧಾರಣೆಗೊಂಡಿದ್ದಾರೆ. ಗುಣಮುಖರಾಗಿ ಬಂದು ಪೂಜೆ ಮಾಡಲಿ. ತಜ್ಞ ವೈದ್ಯರು ಪ್ರಯತ್ನ ಮಾಡುತ್ತಿದ್ದಾರೆ. ಶ್ರೀಗಳು ಕಣ್ಣು ಬಿಡುತ್ತಿದ್ದಾರೆ. ಸೋಂಕು ಆಗಬಾರದೆಂದು ಕಟ್ಟೆಚ್ಚರ ವಹಿಸಲಾಗಿದೆ ಎಂದರು.ಇದೇ ವೇಳೆ ರಾಮ ಮಂದಿರ ಹೋರಾಟ ನೆನಪಿಸಿದ ಸಿಎಂ ಅವರು ಸ್ವಾಮೀಜಿ ಜೊತೆ ಅಂದು 15ಜನ ಇದ್ದೇವು. 16 ಜನರ ಪೈಕಿ ನಾನು ಕೂಡ ಒಬ್ಬ. ಇದು ರಾಮಮಂದಿರ ಕಟ್ಟುವ ಸುಸಂದರ್ಭ. ಮಂದಿರ ನಿರ್ಮಾಣವಾಗುವವರಗೆ ಅವರು ಬದುಕಿರಬೇಕು. ಸ್ವತಂತ್ರ್ಯ ಭಾರತದಲ್ಲಿ ಮತ್ತೊಬ್ಬ ಇವರಷ್ಟು ಓಡಾಟ ಮಾಡುತ್ತಿಲ್ಲ. ಓಡಾಟ ಕಡಿಮೆ ಮಾಡಲು ನೂರಾರು ಬಾರಿ ಹೇಳಿದ್ದೆ, ವಯೋ ಸಹಜ ಸಮಸ್ಯೆ ಕಾಡುತ್ತಿದೆ. ಸ್ವಾಮೀಜಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಈಗಿರುವ ಆರೋಗ್ಯ ಸಮಸ್ಯೆಯನ್ನು ದಾಟಿ ಬರಲಿ. ವೈದ್ಯರು ಎರಡು ದಿನಗಳಲ್ಲಿ ಆರೋಗ್ಯ ಸುಧಾರಣೆ ಆಗಲಿದೆ ಎಂದಿದ್ದಾರೆ. ಮೋದಿ, ಅಮಿತ್ ಶಾ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಮಣಿಪಾಲದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.

Related posts

Leave a Reply

Your email address will not be published. Required fields are marked *