Header Ads
Header Ads
Header Ads
Breaking News

ಪೇಜಾವರ ಶ್ರೀ ಚಿಕಿತ್ಸೆಗೆ ಸ್ಪಂದನೆ ಮಾಡುತ್ತಿದ್ದಾರೆ ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಹೇಳಿಕೆ

ಪೇಜಾವರ ಶ್ರೀಗಳ ಶ್ವಾಸಕೋಶಕ್ಕೆ ನ್ಯುಮೋನಿಯಾ ದಾಳಿ ಮಾಡಿದೆ. ನ್ಯುಮೋನಿಯಾ ಲೆವೆಲ್ ಕಡಿಮೆ ಆಗಿದೆ. ಪೇಜಾವರ ಶ್ರೀ ಚಿಕಿತ್ಸೆಗೆ ಸ್ಪಂದನೆ ಮಾಡುತ್ತಿದ್ದಾರೆ.ಸದ್ಯ ಶ್ವಾಸಕೋಶದ ಸಮಸ್ಯೆ ಮಾತ್ರ ದೊಡ್ಡ ಸಮಸ್ಯೆ. ದೇಹ ಸ್ವಲ್ಪ ನಿತ್ರಾಣಗೊಂಡಿದೆ. ನಿತ್ರಾಣದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಹೇಳಿದರು.

ಅವರು ಮಾಧ್ಯಮದೊಂದಿಗೆ ಮಾತನಾಡಿ, ಪೇಜಾವರ ಶ್ರೀ ಆರೋಗ್ಯ ಅತೀ ಮುಖ್ಯ ಪೇಜಾವರ ಶ್ರೀಗೆ ಯಾರು ಡಿಸ್ಟರ್ಬ್ ಮಾಡಬೇಡಿ. ವಿಐಪಿ, ಭಕ್ತರು ಆಸ್ಪತ್ರೆಗೆ ಬಾರದಿದ್ದರೆ ಒಳಿತು. ಗಣ್ಯರು ಬಂದಾಗೆಲ್ಲ ಐಸಿಯು ಬಾಗಿಲು ತೆರೆಯಬೇಕಾಗುತ್ತದೆ ಇದರಿಂದ ವೈದ್ಯರ ಚಿಕಿತ್ಸೆಗೆ ಅಡ್ಡಿಯಾಗುತ್ತೆ. ಈ ಹಿಂದೆ ಕೂಡಾ ನಾನು ಮನವಿ ಮಾಡಿಕೊಂಡಿದ್ದೆ ಎಂದು ಡಾ. ಅವಿನಾಶ್ ಶೆಟ್ಟಿ ಹೇಳಿದರು.

Related posts

Leave a Reply

Your email address will not be published. Required fields are marked *