Header Ads
Breaking News

ಪೇಪರ್ ಮೂಲಕ ಹಾವನ್ನು ಹಿಡಿಯುವ ವಿಧಾನ ತಿಳಿಸಿದ ಶ್ರೀಗಳು

ಪೇಜಾವರ ಮಠಾದೀಶರಾದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪ್ರಾಣಿ ಮತ್ತು ಪಕ್ಷಿ ಪ್ರೇಮಿ. ಈಗಾಗಲೇ ಗೋವುಗಳ ಪಾಲನೆಯ ಮೂಲಕ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಹಾವುಗಳನ್ನು ಹೇಗೆ ಸುರಕ್ಷಿತವಾಗಿ ಹಿಡಿಯಬೇಕು ಎಂದು ವಿಡಿಯೋ ಮಾಡಿ ತೋರಿಸಿದ್ದರು. ಇದೀಗ ಮತ್ತೊಂದು ಶೈಲಿಯಲ್ಲಿ ಹಾವನ್ನು ಹಿಡಿಯುವ ವಿಧಾನವನ್ನು ತಿಳಿಸಿದ್ದಾರೆ.

ಇತ್ತೀಚಿಗೆ ನೀಲಾವರ ಗೋ ಶಾಲೆಯಲ್ಲಿ ಕಂಡು ಬಂದಿದ್ದ ಹಾವನ್ನು ತೆಂಗಿನ ಮರದ ಗರಿಯ ಮೂಲಕ ಹಿಡಿದು ಹೇಗೆ ಸುರಕ್ಷಿತವಾಗಿ ಹಾವನ್ನು ಹಿಡಿಯಬೇಕು ಎಂದು ತಿಳಿಸಿದ್ದರು. ಇದೀಗ ತಮ್ಮ ಕೊಠಡಿಯಲ್ಲಿ ಕಂಡು ಬಂದ ಕೇರೆ ಹಾವನ್ನು ಪೇಪರ್ ಮೂಲಕ ಸುತ್ತಿ ಹೇಗೆ ಹಿಡಿಯಬೇಕು ಎಂಬುದನ್ನ ತೋರಿಸಿದ್ದಾರೆ. ಪೇಪರ್ ಒಂದನ್ನು ಪೈಪ್ ತರ ಸುತ್ತಿ ಅದರೊಳಗೆ ಹಾವು ಹೋಗುವ ಹಾಗೆ ಮಾಡಿ ಯಾವುದೇ ಹಾವಿಗೆ ಅಪಾಯವಾಗದಂತೆ ಮತ್ತು ಹಿಡಿಯುವವರಿಗೂ ಅಪಾಯವಾಗದ ರೀತಿಯ ನೂತನ ವಿಧಾನವನ್ನು ತೋರಿಸಿಕೊಟ್ಟಿದ್ದಾರೆ. ಇವರ ಈ ವಿಡಿಯೋ ಮೆಚ್ಚಿಗೆಗೂ ಪಾತ್ರವಾಗಿದೆ.

Related posts

Leave a Reply

Your email address will not be published. Required fields are marked *