Header Ads
Breaking News

ಪೇರಾಲು ಪಯಸ್ವಿನಿ ಕ್ರೀಡಾ ಮತ್ತು ಕಲಾ ಸಂಘದ ರಜತ ಸಂಭ್ರಮ

ಮಂಡೆಕೋಲು ಗ್ರಾಮದ ಪೇರಾಲು-ಮೈತಡ್ಕದ ಪಯಸ್ವಿನಿ ಕ್ರೀಡಾ ಮತ್ತು ಕಲಾ ಸಂಘದ ರಜತ ಸಂಭ್ರಮವು ಜ.4 ಮತ್ತು 5 ರಂದು ನಡೆಯಲಿದೆ ಎಂದು ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಪೇರಾಲು ಹೇಳಿದರು.

ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು. ಡಿ. ೨೯ರಂದು ರಜತ ಸಂಭ್ರಮ ಪ್ರಯುಕ್ತ ಹಾಗೂ ದಿ.ಉಮಾನಾಥ ಕುಕ್ಕುಜೆಯವರ ಸ್ಮರಣಾರ್ಥ ಕ್ರೀಡಾ ಕೂಟ ನಡೆಯುವುದು. ಪುರುಷರಿಗೆ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯುವುದು ಎಂದು ಮಾಹಿತಿ ನೀಡಿದ್ರು.

ಸುದ್ದಿಗೋಷ್ಟಿಯಲ್ಲಿ ರಜತ ಸಂಭ್ರಮ ಸಂಚಾಲಕ ಸುಂದರ ಗೌಡ ಕಾಡು ಸೊರಂಜ, ಸಂಘದ ಕಾರ್ಯದರ್ಶಿ ದಿವಾಕರ ಶಿರಾಜೆ, ಪ್ರಕಾಶ್ ಕಾಡುಸೊರಂಜ, ಯಾಹ್ಯ ಎಂ.ಬಿ.ಇದ್ದರು.

Related posts

Leave a Reply

Your email address will not be published. Required fields are marked *