Header Ads
Header Ads
Breaking News

ಪೈವಳಿಕೆ ಗ್ರಾಮ ಪಂಚಾಯತಿನಲ್ಲಿ ಸಿಬ್ಬಂದಿಗಳ ಕೊರತೆ,ಗ್ರಾ.ಪಂ. ವಿರುದ್ಧ ಊರವರ ಆರೋಪ

ಮಂಜೇಶ್ವರ: ಪೈವಳಿಕೆ ಗ್ರಾಮ ಪಂಚಾಯತಿನಲ್ಲಿ ಸಿಬ್ಬಂದಿಗಳ ಕೊರತೆ ಇರುವ ಸಿಬ್ಬಂದಿಗಳು ತಮಗಿಷ್ಟಬಂದಂತೆ ವರ್ತನೆ  ಕರ್ನಾಟಕ ಕೇರಳ ಗಡಿ ಪ್ರದೇಶದಲ್ಲಿರುವ ಪೈವಳಿಕೆ ಗ್ರಾ. ಪಂಚಾಯತಿನಲ್ಲಿ ಸಿಬ್ಬಂದಿಗಳ ಕೊರತೆ ಇದೀಗ ಗ್ರಾಮಸ್ಥರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ. ಇರುವ ಸಿಬ್ಬಂದಿಗಳು ಅವರವರ ಇಷ್ಟಕ್ಕನುಸಾರವಾಗಿ ಕಚೇರಿಗೆ ಆಗಮಿಸಿ ಕಚೇರಿಯಲ್ಲಿರುವ ಸಮಯದಲ್ಲಿ ಮೊಬೈಲುಗಳನ್ನು ಉಪಯೋಗಿಸಿಕೊಂಡು ತನ್ನಿಷ್ಟದಂತೆ ನಿರ್ಗಮಿಸುತ್ತಿರುವುದಾಗಿ ಊರವರು ಆರೋಪಿಸುತಿದ್ದಾರೆ.

ಕಾನೂನನ್ನು ಗಾಳಿಗೆ ತೂರಿ ಕೊಳ್ಳುತ್ತಿರುವ ಸಿಬ್ಬಂದಿಗಳು ಬೆಳಿಗ್ಗೆ 11 ಗಂಟೆಗೆ ಆಗಮಿಸಿ ಮಧ್ಯಾಹ್ನ ೩ ಗಂಟೆಯ ವೇಳೆಗೆ ಕಚೇರಿಯಿಂದ ನಿರ್ಗಮಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಜನಪ್ರತಿನಿಧಿಗಳು ಇದನ್ನು ಕಂಡೂ ಕಾಣದಂತೆ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿರುವುದು ಗ್ರಾಮಸ್ಥರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.ಜನವರಿ ತಿಂಗಳಿನಿಂದ ಕಟ್ಟಡದ ಪರಾವಣೆಗೆ ಲಭಿಸಲು ಅರ್ಜಿ ನೀಡಿದರೂ ಈ ಮೇ ತಿಂಗಳು ಕೊನೆಯಾಗುತಿದ್ದರೂ ಯಾವುದೇ ಪ್ರತಿಕ್ರಿಯೆ ಇಲ್ಲವೆನ್ನಲಾಗಿದೆ.ಗ್ರಾಮದ ದಾರಿ ದೀಪಗಳು ಸಂಪೂರ್ಣವಾಗಿ ನಾಶವಾಗಿದ್ದರೂ ಈ ಬಗ್ಗೆ ತಿರುಗಿ ಕೂಡಾ ನೋಡಲು ಒಬ್ಬ ಜನಪ್ರತಿನಿಧಿಯಾಗಲೀ ಅಧಿಕಾರಿಗಳಾಗಲೀ ಮುಂದೆ ಬರುತ್ತಿಲ್ಲವೆಂಬ ಆರೋಪ ಕೂಡಾ ವ್ಯಾಪಕವಾಗಿದೆ. ಆದರೆ ಪೈವಳಿಕೆ ಪಂಚಾಯತು ವ್ಯಾಪ್ತಿಯ ಹಲವು ವಾರ್ಡುಗಳಲ್ಲಿ ಅನಧಿಕೃತ ಗೂಡಂಗಡಿ (ತಟ್ಟುಕಡ) ಗಳಿಗೆ ಪಂ. ಅಧಿಕೃತರು ಹಿಂಬದಿಯಿಂದ ಅನುಮತಿಯನ್ನು ನೀಡಿ ಜೇಬನ್ನು ತುಂಬಿಸುತ್ತಿರುವುದಾಗಿಯೂ ಊರವರು ಆರೋಪಿಸುತಿದ್ದಾರೆ.ಗ್ರಾಮಾಭಿವೃದ್ದಿಗಾಗಿ ಮಂಜೂರಾಗುವ ಫಂಡ್ ನಿಂದ ನಿರ್ಮಾಣವಾಗುತ್ತಿರುವ ರಸ್ತೆ ಕೂಡಾ ಅಲ್ಪ ಆಯುಸ್ಸನ್ನು ಕಾಣುತ್ತಿರುವುದಾಗಿ ಆರೋಪ ಕೇಳಿ ಬಂದಿದೆ. ದೂರು ಅಥವಾ ಅರ್ಜಿ ನೀಡಲು ಪಂ. ತೆರಳಿದರೆ ಗ್ರಾಮಸ್ಥರಿಗೆ ಕೂರಲು ಕೂಡಾ ಒಂದು ವ್ಯವಸ್ಥೆ ಇಲ್ಲವೆಂಬುದಾಗಿ ಊರವರು ಹೇಳುತಿದ್ದಾರೆ.ಕಳೆದ ವರ್ಷ ಕುಡಿಯುವ ನೀರನ್ನು ವಿತರಿಸಿದವನಿಗೆ ಲಭಿಸಬೇಕಾದ ಹಣ ಈ ತನಕ ಲಭಿಸಿಲ್ಲವೆಂಬುದಾಗಿ ವಿತರಕ ಗ್ರಾಮದಲ್ಲಿ ಡಂಗುರ ಸಾರುತ್ತಿರುವುದಾಗಿಯೂ ಊರವರು ಹೇಳುತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವರ್ಷ ಕೂಡಾ ಗ್ರಾಮದಲ್ಲಿ ಕುಡಿಯುವ ನೀರಿನ ಕ್ಷಾಮ ಎದುರಾಗಿದ್ದರೂ ಈ ತನಕ ಕುಡಿಯುವ ವಿತರಣೆ ನಡೆದಿಲ್ಲವೆನ್ನಲಾಗಿದೆ.ಶಕ್ತಿಯುತವಾದ ವಿರೋಧ ಪಕ್ಷ ಇಲ್ಲಿ ಇಲ್ಲದ ಕಾರಣ ಆಡಳಿತ ಪಕ್ಷಕ್ಕೆ ಇದೊಂದು ವರದಾನವಾಗಿದ್ದು, ಈ ಬಗ್ಗೆ ಸಿಡಿದೆದ್ದಿರುವ ಗ್ರಾಮಸ್ಥರು ಪಂ,ವಿರುದ್ದ ಪ್ರತಿಭಟನೆಗೆ ಸಜ್ಜಾಗುತಿದ್ದಾರೆ.

Related posts

Leave a Reply