Breaking News

ಪೈವಳಿಕೆ ಚೇವಾರಿನಲ್ಲಿ ವ್ಯಾಪಾರಿಯ ಕೊಲೆ, ಅಂಗಡಿಗೆ ನುಗ್ಗಿ ಕತ್ತರಿಸಿ ಪರಾರಿ

ಪೈವಳಿಕೆ ಚೇವಾರಿನಲ್ಲಿ ಓಮ್ನಿ ವ್ಯಾನಿನಲ್ಲಿ ಆಗಮಿಸಿದ ನಾಲ್ಕು ಮಂದಿಯ ತಂಡ ವ್ಯಾಪಾರಿಯೊಬ್ಬರನ್ನು ಅಂಗಡಿಗೆ ನುಗ್ಗಿ ಇರಿದು ಕೊಲೆಗೈದಿದೆ.
ಚೇವಾರ್ ಮಂಡಕಾಪು ನಿವಾಸಿ ೫೫ರ ರಾಮಕೃಷ್ಣ ಕೊಲೆಗೀಡಾದ ವ್ಯಾಪಾರಿ. ಗುರುವಾರ ಮದ್ಯಾಹ್ನ ೨ ಗಂಟೆಗೆ ಈ ಘಟನೆ ನಡೆದಿದೆ. ಓಮ್ನಿ ವ್ಯಾನಿನಲ್ಲಿ ಆಗಮಿಸಿದ ಒಬ್ಬ ಯುವಕ ರಾಮಕೃಷ್ಣರ ಅಂಗಡಿಗೆ ಬಂದು ಸಿಗರೇಟು ಕೇಳಿ ಪಡೆದುಕೊಂಡು ಹೊರ ಬಂದಿದ್ದಾನೆ. ಬಳಿಕ ಓಮ್ನಿಯಲ್ಲಿದ್ದ ಮೂರು ಮಂದಿ ನೇರವಾಗಿ ಅಂಗಡಿಗೆ ನುಗ್ಗಿ ವ್ಯಾಪಾರಿಯನ್ನು ಇರಿದಿದ್ದಾರೆ. ಬೊಬ್ಬೆ ಕೇಳಿ ಊರವರು ಆಗಮಿಸುವಷ್ಟರಲ್ಲಿ ಆರೋಪಿಗಳು ಓಮ್ನಿಯಲ್ಲಿ ಪರಾರಿಯಾಗಿದ್ದಾರೆ. ಶರೀರದಲ್ಲಿ ಹಲವು ಭಾಗಗಳಿಗೆ ಇರಿತಕ್ಕೊಳಗಾದ ರಾಮಕೃಷ್ಣರನ್ನು ಮಂಗಳೂರು ಆಸ್ಪತ್ರೆಗೆ ಕೊಂಡುಹೋಗುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಮಂಗಲ್ಪಾಡಿ ಶವಾಗಾರದಲ್ಲಿ ಮೃತದೇಹ ನೋಡಿದ ಬಳಿಕ ಮಾಧ್ಯಮಗಳಿಗೆ ವಿವರ ನೀಡಿದ ಬಿಜೆಪಿ ನೇತಾರರಾದ ಶ್ರೀಕಾಂತ್, ಸುರೇಶ ಕುಮಾರ್ ಶೆಟ್ಟಿ, ಆದರ್ಶ್, ವೆಲಾಯುಧನ್, ಹರೀಶ್, ವಿಜಯ್ ರೈ, ವಲ್ಸರಾಜ್, ಪ್ರಸಾದ್ ರೈ, ಪದ್ಮನಾಭ ಕಡಪ್ಪುರ ೨ ದಿನಗಳಲ್ಲಿ ಆರೋಪಿಗಳ ಬಂಧನವಾಗದಿದ್ದಲ್ಲಿ ಪ್ರತಿಭಟನೆಗೆ ಬಿಜೆಪಿ ಸಿದ್ಧತೆ ನಡೆಸಿದೆ ಎಂದಿದ್ದಾರೆ.

Related posts

Leave a Reply