Header Ads
Breaking News

ಪೈವಳಿಕೆ ಬೋಳಂಗಳದಲ್ಲಿ ಅಣ್ಣತಮ್ಮ ಜೋಡುಕರೆ ಕಂಬಳ : ಫೆ.23ರ ವರೆಗೆ ವಿವಿಧ ಕಾರ್ಯಕ್ರಮ

 

ಮಂಜೇಶ್ವರ : ಪ್ರಸ್ತುತ ಕಾಸರಗೋಡು ಜಿಲ್ಲೆಯ ಏಕೈಕ ಕಂಬಳವೆಂದೇ ಪ್ರಸಿದ್ಧಿ ಪಡೆದ ಪೈವಳಿಕೆ ಸಮೀಪದ ಬೋಳಂಗಳದಲ್ಲಿ ಸತತ ಎರಡನೇ ಬಾರಿ ಅಣ್ಣ ತಮ್ಮ ಜೋಡುಕರೆ ಕಂಬಳ ಇಂದಿನಿಂದ ಫೆ.23ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಜಾತಿ ಮತ ಬೇಧವಿಲ್ಲದೆ ಅತ್ಯಂತ ಸೌಹಾರ್ದಯುತವಾಗಿ ನಡೆಯುವ ಕಂಬಳವನ್ನು ನಾಡಿನ ಜನತೆ ಯಶಸ್ವಿಗೊಳಿಸಬೇಕೆಂದು ದಕ್ಷಿಣ ಕನ್ನಡ, ಕುಂಬಳೆ ಹಾಗೂ ಕಾಸರಗೋಡು ಜಿಲ್ಲೆಯ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯೆಲು ಅಭಿಪ್ರಾಯಪಟ್ಟರು.

ಮಂಜೇಶ್ವರ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಳಿವಿನಂಚಿನಲ್ಲಿರುವ ಕಂಬಳ ವಿಶ್ವಮಾನ್ಯತೆಯನ್ನು ಪಡೆಯುತ್ತಿದ್ದು, ತುಳುನಾಡಿನ ಸಂಸ್ಕೃತಿಯನ್ನು ಉಳಿಸುವಂತಹ ಕಂಬಳ ಕಾಸರಗೋಡು ಜಿಲ್ಲೆಯಲ್ಲಿ ಅಭಿವೃದ್ಧಿ ಪಡಿಸುವ ಅನಿವಾರ್ಯತೆಯಿದೆ ಎಂದು ತಿಳಿಸಿದರು.

ಬೋಳಂಗಳ ಅಣ್ಣ ತಮ್ಮ ಜೋಡುಕರೆ ಕಂಬಳ ಸಮಿತಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಇದರ ಸಹಯೋಗದಲ್ಲಿ ಅಣ್ಣ ತಮ್ಮ ಜೋಡುಕರೆ ಕಂಬಳ ನಡೆಯಲಿದೆ. 22ರಂದು ಬೆಳಿಗ್ಗೆ 10.30ರಿಂದ ಅಣ್ಣ ತಮ್ಮ ಜೋಡುಕರೆ ಕಂಬಳ ಪ್ರಾರಂಭಗೊಳ್ಳಲಿರುವುದು. ಸುದ್ದಿಗೋಷ್ಠಿಯಲ್ಲಿ ಕೌಡೂರು ಬೀಡು ಮಾರಪ್ಪ ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಭಾಸ್ಕರ ರೈ ಮಂಜಲ್ತೋಡಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *