Header Ads
Breaking News

ಪೊಲೀಸರು ಫೈರ್ ಮಾಡಿದ್ದರಿಂದ ಗಲಭೆ ನಿಯಂತ್ರಣಕ್ಕೆ ಬಂತು : ಮೂಡುಬಿದರೆಯಲ್ಲಿ ಸಚಿವ ಸಿ.ಟಿ. ರವಿ ಹೇಳಿಕೆ

ಮಂಗಳೂರು ಗಲಭೆ ಹಿಂದಿನ ಕಾರಣ ಸಿಸಿಟಿವಿಯಲ್ಲಿದೆ. ಪೊಲೀಸರು ಫೈರ್ ಮಾಡಿದ್ದರಿಂದ ಗಲಭೆ ನಿಯಂತ್ರಣಕ್ಕೆ ಬಂತು. ಪೂರ್ವ ನಿಯೋಜಿತ ಕೃತ್ಯಕ್ಕೆ ಪರಿಹಾರ ಕೊಡಕ್ಕಾಗಲ್ಲ. ಪರಿಹಾರ ಯಾವತ್ತಿಗೂ ಪ್ರಚೋದನೆಯಾಗಬಾರದು. ಸಾವು ಸಾವೇ, ನಾವು ಸಾವನ್ನು ಸಂಭ್ರಮಿಸಲ್ಲ ಎಂದು ಸಚಿವ ಸಿ.ಟಿ. ರವಿ ಹೇಳಿದರು.

ಅವರು ಮೂಡುಬಿದರೆಯಲ್ಲಿ ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿದರು. ಬಿಡುಗಡೆಗೊಳಿಸಿದ ಸಿಸಿಟಿವಿಯಲ್ಲಿ ಯಾರು ಅಪರಾಧಿಗಳು ಅಂತಾ ಗೊತ್ತಾಗಿದೆ. ನಾನು ಪರಿಹಾರಕ್ಕಾಗಿ ಗಲಭೆ ಮಾಡಿದ್ದಾರೆ ಎಂದು ಹೇಳಲ್ಲ. ಪರಿಹಾರ ವಾಪಸ್ ನಿರ್ಧಾರ ಸಿಎಂ ವಿವೇಚನೆಗೆ ಬಿಟ್ಟದ್ದು. ಮೃತರಿಗೆ ಘೋಷಿಸಿದ ಪರಿಹಾರ ವಾಪಸ್ ವಿಚಾರ ನನಗೆ ಗೊತ್ತಿಲ್ಲ. ಸತ್ತವರು ಅಮಾಯಕರು ಎಂದು ಸರ್ಟಿಫಿಕೇಟ್ ಕೊಡುವ ರೀತಿಯಲ್ಲಿಲ್ಲ ಸಿಸಿಟಿವಿ ದೃಶ್ಯ ಎಂದು ಸಚಿವ ಸಿ.ಟಿ. ರವಿ ಹೇಳಿದರು.

Related posts

Leave a Reply

Your email address will not be published. Required fields are marked *