Header Ads
Header Ads
Breaking News

ಪೊಲೀಸ್ ಇಲಾಖೆಯ ಕುಟುಂಬ ವರ್ಗಕ್ಕೆ ವಾಹನ ಚಾಲನಾ ತರಬೇತಿ ಅಸೈಗೋಳಿಯಲ್ಲಿ ನಡೆದ ಉದ್ಘಾಟನಾ ಸಮಾರಂಭ

ಬೆಂಗಳೂರಿನ ಕೆಎಸ್‌ಆರ್‌ಪಿ, ಅಡಿ?ನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಮಾರ್ಗದರ್ಶನದಂತೆ ಇಲಾಖೆಯ ಕುಟುಂಬ ವರ್ಗದವರಿಗೆ ವಾಹನ ಚಾಲನಾ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅಸೈಗೋಳಿಯ ಕೆಎಸ್‌ಆರ್‌ಪಿ,7ನೇ ಪಡೆಯ ಕಮಾಂಡೆಂಟ್, ಜನಾರ್ಧನ ಆರ್‌ರವರು, ಎಡಿಜಿಪಿ, ಕೆಎಸ್‌ಆರ್‌ಪಿ, ಬೆಂಗಳೂರುರವರ ಮಾರ್ಗದರ್ಶನದಂತೆ ಸುಬ್ರಮಣ್ಯ ವಾಹನ ಚಾಲನಾ ತರಬೇತಿ ಸಂಸ್ಥೆ ದೇರಳಕಟ್ಟೆರವರ ಸಹಯೋಗವನ್ನು ಪಡೆದುಕೊಂಡು ಅತೀ ಕಡಿಮೆ ದರದಲ್ಲಿ ದ್ವಿಚಕ್ರ ವಾಹನ ಹಾಗೂ ಲಘು ವಾಹನ ತರಬೇತಿಯ ಜೊತೆಗೆ ಲೆಸನ್ಸ್‌ನ್ನು ನೀಡುತ್ತಾರೆ.       ಈ ಅವಕಾಶವನ್ನು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಿ ಎಂದರು. ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಪ್ರಕಾಶ ಭಂಡಾರಿಯವರು, ಸುಬ್ರಮಣ್ಯ ವಾಹನ ಚಾಲನಾ ತರಬೇತಿ ಶಾಲೆ ದೇರಳಕಟ್ಟೆರವರು ಪೊಲೀಸ್ ಇಲಾಖೆಯ ಸಿಬ್ಬಂದಿಯವರಿಗೆ ಹಾಗೂ ಕುಟುಂಬದವರಿಗೆ ನನ್ನ ಸಂಸ್ಥೆಯಿಂದ ವಾಹನ ಚಾಲನಾ ತರಬೇತಿ ನೀಡುವುದರ ಮೂಲಕ ಸೇವೆಯನ್ನು ನೀಡಲು ನನಗೆ ಹೆಮ್ಮೆಯ ವಿ?ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಮೋದ ಕುಮಾರ ಜಿ, ಸಹಾಯಕ ಕಮಾಂಡೆಂಟ್, ಶರತ್ ಎಂ ಎ, ಶ್ರೀ ಪೊಲೀಸ್ ಇನ್ಸ್‌ಪೆಕ್ಟರ್ ರಾಜು, ಅಧಿಕಾರಿಗಳು ಮತ್ತು ಇಲಾಖೆಯ ಕುಟುಂಬ ವರ್ಗದವರು ಹಾಜರಿದ್ದರು.

Related posts

Leave a Reply