Header Ads
Header Ads
Breaking News

ಪೊಲೀಸ್ ಇಲಾಖೆಯ ’100ನೇ ಪೋನ್ ಇನ್’ ವಿಶೇಷ ಕಾರ್ಯಕ್ರಮ

ಮಂಗಳೂರು ನಗರಪೊಲೀಸ್ ಇಲಾಖೆಯ 100ನೇಪೊಲೀಸ್ ಇನ್ ವಿಶೇಷ ಕಾರ್ಯಕ್ರಮ ಪೊಲೀಸ್ ಅಯುಕ್ತರಾದ ಟಿ.ಆರ್.ಸುರೇಶ್ ರವರ ನೇತೃತ್ವದಲ್ಲಿ ಮಂಗಳೂರಿನ ಪೊಲೀಸ್ ಅಯುಕ್ತರ ಕಚೇರಿಯಲ್ಲಿ ನಡೆಯಿತು.

ಪೊಲೀಸ್ ಪೋನ್‍ಇನ್ ಇದೊಂದು ವಿನೂತನ ಕಾರ್ಯಕ್ರಮ. 2016 ಆಗಸ್ಟ್ 5 ರಿಂದ ಪ್ರಾರಂಭಗೊಂಡಿದ್ದು, ಇಂದು 100ನೇ ವಿಶೇಷ ಪೊಲೀಸ್ ಇನ್ ಕಾರ್ಯಕ್ರಮ ಹಮ್ಮಿಕೊಂಡರು. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂತು.

ಸಂಚಾರಿ ವ್ಯವಸ್ಥೆಯ ಬಗ್ಗೆ ಮೀನಿನ ವಾಹನಗಳು ವೆಸ್ಟ್ ನೀರನ್ನು ರಸ್ತೆಗೆ ಬಿಡುವ ಬಗ್ಗೆ, ಅಕ್ರಮವಾಗಿ ನಡೆಸುತ್ತಿರುವ ಜುಂಬಾ,ಜಿಮ್‍ಗಳ ಬಗ್ಗೆ, ಸಿಟಿ ಬಸ್‍ಗಳ ಅತೀ ವೇಗದ ಬಗ್ಗೆ, ಫುಟ್ ಬಾತ್ ಸಮಸ್ಯೆಗಳ ಬಗ್ಗೆ ಪಾರ್ಕಿಂಗ್ ಸಮಸ್ಯೆಗಳ ಬಗ್ಗೆ ಸೇರಿದಂತೆ ಅನೆಕ ಸಮಸ್ಯೆಗಳನ್ನು ಸಾರ್ವಜನಿಕರು ತೋಡಿಕೊಂಡ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಪೊಲೀಸ್ ಅಯುಕ್ತರಾದ ಭರವಸೆ ನೀಡಿದರು.

ಈ ವೇಳೆ ಪೊಲೀಸ್-ಇನ್ ಕಾರ್ಯಕ್ರಮಕ್ಕೆ ಸಹಕರಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿ, ಚೀಫ್ ವಾರ್ಡನ್ ಹಾಗೂ ಇತರ ಅಧಿಕಾರುಗಳನ್ನು ಸನ್ಮಾನಿಸಲಾಯಿತು.ಪೊಲೀಸ್ ಇಲಾಖೆ ಏರ್ಪಡಿಸಿದ ಡ್ರಾಯಿಂಗ್ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ಪತ್ರಕರ್ತರ ವತಿಯಿಂದ 100ನೇ ಪೊಲೀಸ್ಇನ್ ವಿಶೇಷ ಕಾರ್ಯಕ್ರಮ ನಡೆಸುತ್ತಿರುವ ಪೊಲೀಸ್ಅಯುಕ್ತರಾದ ಟಿ.ಆರ್.ಸುರೇಶ್‍ರವರನ್ನು ಗೌರವಿಸಲಾಯಿತು.

ಈ ಸಂದರ್ಭ ಡಿಸಿಪಿ ಉಮ ಪ್ರಶಾಂತ್,ಹನುಮಂತರಾಯ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು

Related posts

Leave a Reply