Breaking News

ಪೊಲೀಸ್ ಇಲಾಖೆ ಎರಡು ಗಸ್ತು ವಾಹನಗಳ ಉದ್ಗಾಟನೆ

ಭಟ್ಕಳ ನಗರದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳು, ಅಪಘಾತಗಳ ಸಂಖ್ಯೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಎರಡು ಗಸ್ತು ವಾಹನಗಳನ್ನು ಸೋಮವಾರದಂದು ಪುರಸಭೆ ಅಧ್ಯಕ್ಷ ಸಾಧಿಖ್ ಮಟ್ಟಾ ಹಳೆ ಬಸ್ ನಿಲ್ದಾಣದ ಬಳಿ ಉದ್ಘಾಟಿಸಿದರು.

ಎರಡು ಗಸ್ತು ವಾಹನವನ್ನು ಉದ್ಘಾಟಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಸಾಧಿಖ್ ಮಟ್ಟಾ ನಗರದಲ್ಲಿ ಅಪರಾಧ ಪ್ರಕರಣಗಳನ್ನು ಹತ್ತಿಕ್ಕುವಲ್ಲಿ ನೂತನ ತಂತ್ರಜ್ಞಾನ ಅವಶ್ಯಕತೆ ಇದ್ದು, ಇಲಾಖೆ ಹೊಸಮಾದರಿಯ ವಾಹನಗಳನ್ನು ನೀಡುತ್ತಿರುವುದು ಉತ್ತಮ ಕಾರ್ಯ ಎಂದರು.
ಡಿ.ವೈ.ಎಸ್.ಪಿ. ಶಿವಕುಮಾರ ಪಿ.ಒ. ಮಾತನಾಡಿ ಜಿಲ್ಲೆಯಲ್ಲಿಯೇ ಭಟ್ಕಳಕ್ಕೆ ಮಾತ್ರ ನೂತನ ಪೆಟ್ರೋಲಿಂಗ್ ವ್ಯವಸ್ಥೆ ದೊರಕಿದ್ದು, ಇದರ ಸಂಪೂರ್ಣ ಪ್ರಯೋಜನ ಪಡೆದು ಅಪರಾದ ಪ್ರಕರಣಗಳನ್ನು ಮಟ್ಟ ಹಾಕಲಾಗುವದು.
ಈ ಸಂದರ್ಬದಲ್ಲಿ ಸಿ.ಪಿ.ಐ. ಸುರೇಶ ನಾಯಕ, ಪಿ.ಎಸ್.ಐ. ಕುಡಗಂಟಿ, ನಿವೃತ್ತ ಬ್ಯಾಂಕ ಮೆನೆಜರ ಎಮ್.ಆರ್.ನಾಯ್ಕ, ಪುರಸಭೆಯ ಸದಸ್ಯರು ಸೇರಿದಂತೆ ರಿಕ್ಷಾಚಾಲಕ ಮಾಲಕ ಸಂಘದ ಉಪಾಧ್ಯಕ್ಷ ನಯೀಮ್ ಸೇರಿದಂತೆ ಇತರರು ಇದ್ದರು.

Related posts

Leave a Reply