Header Ads
Breaking News

ಪೊಲೀಸ್ ಫೋನ್ ಇನ್ ಕಾರ್ಯಕ್ರಮ : ಆನ್‌ಲೈನ್ ವ್ಯವಹಾರಗಳಿಂದಾದ ಮೋಸಗಳದ್ದೇ ಕಂಪ್ಲೇಂಟ್

ನಗರ ಪ್ರದೇಶದಲ್ಲಿ ಖಾಸಗಿ ಬಸ್‌ಗಳು ನಿಗದಿಪಡಿಸಿದ ಬಸ್‌ಸ್ಟಾಂಡ್‌ಗಳಲ್ಲಿ ನಿಲ್ಲುತ್ತಿಲ್ಲ, ಕರ್ಕಶ ಹಾರ್ನ್‌ಗಳ ಅಳವಡಿಕೆ ಮತ್ತು ಟಿಕೆಟ್ ಕೊಡುವುದಿಲ್ಲ ಎನ್ನುವ ಹಲವು ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಈ ಬಗ್ಗೆ ತಕ್ಷಣವೇ ಕ್ರಮ ಜರುಗಿಸಲಾಗುವುದು ಅಂತಾ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮೀಗಣೇಶ್ ಹೇಳಿದರು. ಮಂಗಳೂರಿನ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿ, ಮಾತನಾಡಿದ್ರು. ಮುಂದಿನ ದಿನಗಳಲ್ಲಿ ಇಂತಹಾ ಸಮಸ್ಯೆಗಳು ಬರದಂತೆ ಈಗಾಗಲೇ ಎಲ್ಲಾ ಬಸ್ ಮಾಲಕರಿಗೆ ನೊಟೀಸ್ ಕಳುಹಿಸಿದ್ದೇವೆ ಮತ್ತು ಶೀಘ್ರವಾಗಿ ಈ ಸಮಸ್ಯೆಯನ್ನು ಬಗೆಹರಿಸುವಂತೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.

ಇನ್ನು ಮೀನು ಸಾಗಾಟದ ವಾಹನಗಳು ವಾಹನಗಳಿಗೆ ಕ್ಯಾನ್ ಅಳವಡಿಸಬೇಕು. ರಸ್ತೆಯಲ್ಲಿ ಮೀನಿನ ತ್ಯಾಜ್ಯ ನೀರನ್ನು ಬಿಡಬಾರದು. ಇನ್ನು ಇಂತಹಾ ಘಟನೆ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿಪಿ ಎಚ್ಚರಿಕೆ ನೀಡಿದ್ರು.

ಬಸ್‌ನಲ್ಲಿ ವಯಸ್ಸಾದವರು, ಮಹಿಳೆಯರು ಬಂದಾಗ ಸೀಟನ್ನು ಬಿಟ್ಟುಕೊಡಬೇಕು. ಇದು ಸಾಮಾನ್ಯವಾದ ಒಂದು ಮಾನವೀಯ ವರ್ತನೆ. ಮಂಗಳೂರಿನ ಜನತೆ ಟ್ರಾಫಿಕ್ ನಿಯಮಗಳನ್ನು ಪಾಲಿಸುವಲ್ಲಿ ಇನ್ನೂ ಹಿಂದೆಯಿದ್ದಾರೆ. ಇದು ಬೇಸರದ ಸಂಗತಿ. ನಾಗರಿಕರು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೋಸ ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹಾ ಪ್ರಕರಣಗಳು ಹೆಚ್ಚಾಗುತ್ತಿದೆ. ಪೇಸ್‌ಬುಕ್,ವಾಟ್ಸಾಪ್, ಇಂತಹಾ ಜಾಲತಾಣಗಳನ್ನು ಜಾಗುರೂಕತೆಯಿಂದ ಬಳಸಬೇಕು ಎಂದು ಹೇಳಿದರು.

Related posts

Leave a Reply

Your email address will not be published. Required fields are marked *