Header Ads
Header Ads
Breaking News

ಪೊಲೀಸ್ ರಕ್ಷಣೆಯೊಂದಿಗೆ ಹೆಜಮಾಡಿಯಲ್ಲಿ ಟೋಲ್ ಸಂಗ್ರಹ

ಜನ ವಿರೋಧದ ನಡುವೆ ಜಿಲ್ಲಾಢಳಿತ ಪೊಲೀಸ್ ರಕ್ಷಣೆಯೊಂದಿಗೆ ಹೆಜಮಾಡಿಯಲ್ಲಿ ಟೋಲ್ ಸಂಗ್ರಹ ಆರಂಭಿಸಿದ್ದಾರೆ. ಜನ ವಿರೋಧಿಯಾಗಿ ನಡೆಯುತ್ತಿರುವ ಈ ಟೋಲ್ ಸಂಗ್ರಹವನ್ನು ತಕ್ಷಣ ನಿಲ್ಲಿಸಬೇಕು ಕಾಮಗಾರಿ ಪೂರ್ಣಗೊಂಡ ಬಳಿಕ ಆರಂಭಿಸ ಬೇಕು, ತಪ್ಪಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಹೋರಾಟ ನಡೆಸಲಿದೆ ಎಂಬುದಾಗಿ ಮಾತೃ ಸಂಘಟನಾ ಸದಸ್ಯ ಹಾಗೂ ದಲಿತ ಮುಖಂಡ ಲೋಕೇಶ್ ಕಂಚಿನಡ್ಕ ಎಚ್ಚರಿಸಿದ್ದಾರೆ.


ಕಳೆದ ಎಂಟು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಅರೆಬರೆ ಕಾಮಗಾರಿಗಳಿಂದಾಗಿ ಹೆದ್ದಾರಿ ಅಪಘಾತಕ್ಕೆ ಅದೇಷ್ಟೋ ಪ್ರಾಣ ಬಲಿಯಾಗಿದ್ದರೂ ಜನಪ್ರತಿನಿಧಿಗಳು ಸಹಿತ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಾತ್ರವಲ್ಲ ಕಾಮಗಾರಿಯಲ್ಲೂ ಮಲತಾಯಿ ಧೋರಣೆ ತಾಳಿದ ಇಲಾಖೆ, ಪಡುಬಿದ್ರಿ ಪೇಟೆಯಲ್ಲಿ ತಾರತಮ್ಯ ನಡೆಸಿದೆ.

ಹಳೆಯ ಹೆದ್ದಾರಿಯ ಮಧ್ಯಭಾಗದಿಂದ ಎರಡೂ ಕಡೆಗಳಲ್ಲೂ ಸರಿ ಸಮಾನವಾಗಿ ಕಟ್ಟಡಗಳು ತೆರವುಗೊಂಡು ಕಾಮಗಾರಿ ನಡೆಯ ಬೇಕಾಗಿದ್ದರೂ, ಇಲ್ಲಿ ಮಾತ್ರ ಪಶ್ಚಿಮ ದಿಕ್ಕಿನಲ್ಲಿ ಕಾನೂನು ರೀತ್ಯಾ ತೆರವು ಕಾರ್ಯ ನಡೆದಿದ್ದರೂ, ಪೂರ್ವ ದಿಕ್ಕಿನಲ್ಲಿ ಮಾತ್ರ ಯಾವುದೇ ಕಾಣದ ಕೈಗಳ ಹಣ ಹಾಗೂ ಅಧಿಕಾರ ದುರಪಯೋಗ ಮಾಡುವ ಮೂಲಕ, ಅರೆಬರೆ ಕಟ್ಟಡಗಳನ್ನು ಉಳಿಸಿ ಪೂರಕ ಸರ್ವಿಸ್ ರಸ್ತೆ ಸಹಿತ ಪಾರ್ಕಿಂಗ್‌ಗೆ ಅವಕಾಶವೇ ಇಲ್ಲದಂತೆ ತುಂಡರಿಸಿದ ಕಟ್ಟಡಗಳಿಗೆ ತೇಪೆ ಹಾಕಿ, ಕಾನೂನು ಬಾಹಿರವಾಗಿ ವ್ಯಾಪಾರ ವಹಿವಾಟು ಮುಂದುವರಿಸಿದ್ದು ಮಲತಾಯಿ ಧೋರಣೆಯ ಅಂತಿಮ ಹಂತವಾಗಿದೆ.

ಎಲ್ಲವೂ ಎಲ್ಲರೂ ಕಾನೂನಿನ ಚೌಕಟಿನಲ್ಲಿ ಬರುವುದರಿಂದ ಇಲ್ಲಿ ನಡೆದ ತಾರತಮ್ಯವನ್ನು ನೋಡಿ ಸಹಿಸಲು ಸಾಧ್ಯವಿಲ್ಲ, ಎರಡೂ ಕಡೆಗಳಲ್ಲೂ ಒಂದೇ ರೀತಿಯಾಗಿ ತೆರವುಕಾರ್ಯ ನಡೆಸ ತಕ್ಕದ್ದು, ಐದು ಮೀಟರ್ ಅಗಲದ ರಸ್ತೆ ಡಿವೈಡರ್ ನಿರ್ಮಿಸಲೇ ಬೇಕು. ಈ ಎಲ್ಲಾ ಕಾಮಗಾರಿಗಳು ಮುಂದಿನ ಒಂದು ತಿಂಗಳೋಳಗೆ ನಡೆಯ ಬೇಕಾಗಿದ್ದು, ತಪ್ಪಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಮಾನ ಮನಸ್ಕ ಸಂಘಟನೆಗಳು ರಾಜಕೀಯ ರಹಿತವಾಗಿ ಉಗ್ರ ಹೋರಾಟಕ್ಕೆ ಮುಂದಾಗಲಿದ್ದೇವೆ ಎಂಬುದಾಗಿ ಲೋಕೇಶ್ ಕಂಚಿನಡ್ಕ ಎಚ್ಚರಿಸಿದ್ದಾರೆ. ಈ ಸಂದರ್ಭ ಸಂಘಟನೆಯ ರಾಜ್ಯ ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು.
ವರದಿ-ಸುರೇಶ್ ಎರ್ಮಾಳ್

Related posts

Leave a Reply