Header Ads
Header Ads
Breaking News

ಪೊಸೋಟು ತಂಘ ಉರೂಸ್‌ಗೆ ಚಾಲನೆ. ಆಗಸ್ಟ್ 30ರಂದು ವಿವಿಧ ಕಾರ್ಯಕ್ರಮ.

ಮಂಜೇಶ್ವರ: ಕೇರಳ ಕರ್ನಾಟಕ ಜನತೆಗೆ ಆತ್ಮೀಯ ಬೆಳಕು ನೀಡಿದ ವಿದ್ವಾಂಸ, ವಿವಿಧ ಮೊಹಲ್ಲಾಗಳ ಖಾಝಿ, ಪೊಸೋಟು ಮಳ್ ಹರ್ ಸಂಸ್ಥೆಯ ಶಿಲ್ಪಿ ಖಾಝಿ ಸಯ್ಯದ್ ಮೊಹಮ್ಮದ್ ಉಮರುಲ್ ಫಾರೂಕ್ ಅಲ್ ಬುಖಾರಿ ತಂಘಲ್ ರವರ ಹೆಸರಿನಲ್ಲಿ ನಡೆಸಿ ಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಆಗಸ್ಟ್ 30ರಂದು ನಡೆಯಲಿದೆ.ಆಗಸ್ಟ್ 27 ರಂದು ಸಂಜೆ ಆಟಕೋಯ ತಂಘಲ್ ಧ್ವಜಾರೋಹಣ ಗೈದು ಊರೂಸ್ ಗೆ ಚಾಲನೆ ನೀಡಿದ್ದಾರೆ. ಇಂದು ರಾತ್ರಿ ಪೂಕುಂಞಿ ತಂಘಲ್ ಕಲ್ಲಕಟ್ಟ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಜಹಫರ್ ಸಾದಿಖ್ ತಂಘಲ್ ಕುಂಬೋಲ್ಉದ್ಘಾಟಿಸಲಿದ್ದಾರೆ.29 ರಂದು ಜಲಾಲುದ್ದೀನ್ ಸಾದಿ ಅಲ್ ಬುಖಾರಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಟಿಯಲ್ಲಿ ಅಬ್ದುಲ್ ರಹ್ಮಾನ್ ಶಹೀರ್ ಅಲ್ ಬಖಾರಿ, ಆಹ್ಮದ್ ಜಲಾಲದ್ದೀನ್ ಸಾದಿ ಅಲ್ ಬುಖಾರಿ ಉಪಸ್ಥಿತರಿದ್ದರು.

Related posts

Leave a Reply