Header Ads
Header Ads
Header Ads
Breaking News

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ : ಮೀಯಪದವಿನಲ್ಲಿ ನಡೆದ ಭಾರೀ ಪ್ರತಿಭಟನೆ

ಮಂಜೇಶ್ವರ: ಪೌರತ್ವ ತಿದ್ದುಪಡಿ ವಿರುದ್ಧ ಮೀಯಪದವಿನಲ್ಲಿ ಮೀಂಜ ಗ್ರಾ.ಪಂ.ನ ಅಧೀನದಲ್ಲಿರುವ 27 ಜಮಾಹತ್‌ಗಳು ಹಾಗೂ ಇತರ ಸಂಘಟನೆಗಳು ಒಟ್ಟಾಗಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಭಾರೀ ಪ್ರತಿಭಟನೆ ನಡೆಸಿದರು. ಚಿಗುರುಪಾದೆಯಿಂದ ಮೀಯಪದವು ಜಂಕ್ಷನಿಗೆ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಕೇಂದ್ರ ಸರಕಾರದ ವಿರೋಧಿ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಬ್ದುಲ್ ಖಾದರ್ ಸಖಾಫಿ, ಸತ್ತಾರ್ ಹಾಜಿ, ಅಬೂಬಕ್ಕರ್ ಸಿದ್ದೀಖ್, ಬಾವ ಹಾಜಿ, ಅಲಿ ದಾರಿಮಿ ಮೊದಲಾದವರು ಪ್ರತಿಭಟನಾ ಮೆರವಣಿಗೆಗೆ ಮುಂದಾಳತ್ವ ವಹಿಸಿದ್ದರು. ಬಳಿಕ ಮೀಯಪದವಿನಲ್ಲಿ ಸಹಸ್ರಾರು ಸಂಖ್ಯೆಯ ಜನಸ್ತೋಮವನ್ನು ಸಾಕ್ಷಿಯಾಗಿಸಿಕೊಂಡು ನಡೆದ ಸಾರ್ವಜನಿಕ ಸಭೆಯಲ್ಲಿ ಖಾದರ್ ಕರಿಪೊಡಿ ಮುಖ್ಯ ಪ್ರಭಾಷಣ ಗೈದರು. 

Related posts

Leave a Reply

Your email address will not be published. Required fields are marked *