Header Ads
Breaking News

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಜೇಶ್ವರ ಪೌರತ್ವ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ

ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‍ಆರ್‍ ಸಿ, ಸಿಎಎ, ಎನ್‍ಆರ್‍ ಪಿ ಜಾರಿಯನ್ನು ವಿರೋಧಿಸಿ ಮಂಜೇಶ್ವರ ಪೌರತ್ವ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಪೌರತ್ವ ಸಂರಕ್ಷಣಾ ಜಾಥಾವು ನಡೆಯಿತು.

ಕುಂಜತ್ತೂರಿನಿಂದ ಆರಂಭಗೊಂಡ ರಾಲಿಯು ಹೊಸಂಗಡಿ ಪೇಟೆಯಲ್ಲಿ ಸಮಾರೋಪಗೊಂಡಿತು. ಸಾವಿರಾರು ಮಂದಿ ರಾಲಿಯಲ್ಲಿ ಭಾಗವಹಿಸಿ ಕಾಯ್ದೆ ವಿರುದ್ಧ ಘೋಷಣೆ ಕೂಗಿದರು. ಹೊಸಂಗಡಿಯಲ್ಲಿ ನಡೆದ ಸಮಾರೋಪ ಸಮಾವೇಶವನ್ನು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಬಳಿಕ ಮಾತಾನಾಡಿದ ಅವರು ಕೇಂದ್ರದ ಮೋದಿ ಅಮಿತ್ ಶಾ ನೇತೃತ್ವದ ಬಿ.ಜೆ.ಪಿ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ದೇಶವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದರು.

ವಿವಿಧ ಪಕ್ಷಗಳ ಮುಖಂಡರುಗಳಾದ ಎ.ಕೆ. ಎಂಅಶ್ರಫ್, ಹರ್ಷಾದ್ ವರ್ಕಾಡಿ, ಕೆ. ಆರ್ ಜಯಾನಂದ, ಪತ್ರಕರ್ತರಾದ ರಹಿಮಾನ್ ಉದ್ಯಾವರ, ಆರಿಫ್ ಮಚ್ಚಂಪಾಡಿ, ರಾಮಕೃಷ್ಣ ಕಡಂಬಾರು, ಪ್ರಭಾಕರ ಚೌಟ, ಸೈಫುಲ್ಲಾ ತಂಘಳ್, ಇಕ್ಬಾಲ್ ಹೊಸಂಗಡಿ, ಬಶೀರ್ ಕನಿಲ, ಖಾಲಿದ್ ದುರ್ಗಿಪ್ಪಳ್ಳ, ರಫೀಕ್ ಹೊಸಂಗಡಿ, ಹನೀಫ್, ಮುಕ್ತಾರ್ ಉದ್ಯಾವರ, ಮುಸ್ತಫಾ ಉದ್ಯಾವರ, ಹಮೀದ್ ಮೊದಲಾದವರು ನೇತೃತ್ವ ನೀಡಿದರು.

Related posts

Leave a Reply

Your email address will not be published. Required fields are marked *