Header Ads
Breaking News

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪಡುಬಿದ್ರಿಯಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಮೊಂಬತ್ತಿ ಪ್ರತಿಭಟನೆ

ದುರಾದೃಷ್ಟವಶಾತ್ ಪ್ರಧಾನಿಯಾಗಿದ್ದ ಮಾಜಿ ಪ್ರಧಾನಿ ವಾಜಪೇಯಿ ಹೋರಾಟವೊಂದರಲ್ಲಿ ಕಾಣಿಸಿಕೊಂಡಿದ್ದು, ಪೊಲೀಸರು ವಿಚಾರಣೆ ನಡೆಸಿದಾಗ ನಾನು ನೋಡಲು ಬಂದಿದ್ದೆ ಎನ್ನುವ ಮೂಲಕ ಪ್ರಕರಣದಲ್ಲಿ ಜಾರಿಕೊಂಡಿದ್ದಾರೆ. ಹೀಗೆ ಬಿಜೆಪಿಗರು ಯಾರಲ್ಲೂ ಹೋರಾಟದ ಕಿಚ್ಚಿಲ್ಲ ಎಂಬುದಾಗಿ ವಿಚಾರವಾದಿ ಫಾ. ವಿಲಿಯಂ ಮಾರ್ಟಿನ್ ಹೇಳಿದ್ದಾರೆ.
ಅವರು ಪಡುಬಿದ್ರಿ ಪೇಟೆಯಲ್ಲಿ ರಾತ್ರಿ ಹೊತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಉಡುಪಿ ಇವರು ಆಯೋಜಿಸಿದ ಮೊಂಬತ್ತಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಪೌರತ್ವ ತಿದ್ದುಪಡಿ ಖಾಯಿದೆಯ ವಿರುದ್ಧ ಪ್ರತಿಭಟಿಸಿದ್ದ ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ರಾವಣ್‍ರವರನ್ನು ಬಂಧಿಸಿದ ಪೊಲೀಸರು, ಅವರ ಆರೋಗ್ಯ ಸ್ಥಿತಿ ಕೆಟ್ಟಿದ್ದರೂ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿಲ್ಲ, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವಂತ್ತೆ ಸಭೆಯಲ್ಲಿ ಒತ್ತಾಯಿಸಿದರು. ಈ ಸಂದರ್ಭ ದಲಿತ ನಾಯಕರುಗಳಾದ ಸುಂದರ ಮಾಸ್ತರ್, ಶ್ಯಾಮ್‍ರಾಜ್ ಬಿರ್ತಿ, ಪ್ರೋ| ಪಣಿರಾಜ್, ಮುಸ್ಲಿಂ ಒಕ್ಕೂಟದ ಪ್ರಮುಖರಾದ ಅನ್ವರ್ ಆಲಿ ಕಾಪು, ಮೊಹಮ್ಮದ್ ಇಕ್ಬಾಲ್, ಸುಖೇಶ್ ಪಡುಬಿದ್ರಿ ಮುಂತಾದವರಿದ್ದರು.

Related posts

Leave a Reply

Your email address will not be published. Required fields are marked *