Header Ads
Breaking News

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ : ತೊಕ್ಕೊಟ್ಟಿನಲ್ಲಿ ಎಸ್‌ಡಿಪಿಐನಿಂದ ಪ್ರತಿಭಟನೆ

ಉಳ್ಳಾಲ: ಪೌರತ್ವ ತಿದ್ದುಪಡಿ ಮಸೂದೆ ಕೇಂದ್ರ ಸಚಿವ ಸಂಪುಟ ದಲ್ಲಿ ಅಂಗೀಕರಿಸುವುದನ್ನು ವಿರೋಧಿಸಿ ತೊಕ್ಕೋಟ್ಟುವಿನಲ್ಲಿ ಪ್ರತಿಭಟನೆ ನಡೆಯಿತು. ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ದೇಶದ ಸಂವಿಧಾನ ನಶಿಸಿ ಪ್ಯಾಶಿಸ್ಟ್ ಸಿದ್ದಾಂತ ದೇಶದಲ್ಲಿ ಜಾರಿ ಯಾಗುತಿದೆ. ಮೋದಿ ಅಧಿಕಾರದಲ್ಲಿ ಅಭಿವೃದ್ಧಿ ಮಾಡದೇ ಭಾವನಾತ್ಮಕ ವಿಚಾರ ವನ್ನು ಮುಂದಿಟ್ಟುಕೊಂಡು ಮುಸ್ಲಿಮರಿಗೆ ತೊಂದರೆ ಮಾಡುತ್ತಿದ್ದಾರೆ. ಶರೀಯತ್ ಕಾನೂನನ್ನು ಹಸ್ತಕ್ಷೇಪ ಮಾಡಿ ಮುಸ್ಲಿಮ್ ರನ್ನು ಕ್ರಿಮಿನಲ್ ಮಾಡಲು ಸರ್ಕಾರ ಹೊರಟಿದೆ. ಜನ ವಿರೋಧಿ ನೀತಿ ತರುವ ಮೂಲಕ ಮುಸ್ಲಿಮರ ಮೇಲೆ ಸವಾರಿ ಮಾಡುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಕಾರ್ಯದರ್ಶಿ ಝಾಹಿದ್ ಮಲಾರ್ ಮಾತನಾಡಿ ಪೌರತ್ವ ತಿದ್ದುಪಡಿ ಮಸೂದೆ ಯನ್ನು ಅಂಗೀಕರಿಸುವ ಮೂಲಕ ಕೇಂದ್ರ ಸರ್ಕಾರ ನಮ್ಮ ಮೇಲೆ ಸವಾರಿ ಮಾಡಲು ಹೊರಟಿದೆ.ದೇಶದ ಸಂವಿಧಾನ ನಮಗೆ ನೀಡಿದ ಹಕ್ಕು. ಬಾಬರಿ ಮಸೀದಿ ತೀರ್ಪು ನಮಗೆ ಅಸಮಾಧಾನ ತಂದಿದೆ. ಮಸೀದಿ ಧ್ವಂಸ ಮಾಡಿದವರಿಗೆ ಶಿಕ್ಷೆ ಆಗಬೇಕು. ಮಸೂದೆ ಯನ್ನು ಅರಬಿ ಸಮುದ್ರ ಕ್ಕೆ ಎಸೆಯಲಿದ್ದೇವೆ.ನೆಮ್ಮದಿ ಬದುಕು ಎಲ್ಲರಿಗೂ ಬೇಕು. ನಾವು ಭಾರತೀಯ ಮುಸಲ್ಮಾನರಾಗೀ ಇಲ್ಲಿಯೇ ಬದುಕುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಅಬ್ಬಾಸ್ ಕಿನ್ಯ,ಝಾಹಿದ್ ಮಲಾರ್,ಟಿ.ಇಸ್ಮಾಯಿಲ್ ತಲಪಾಡಿ,ಇಕ್ಬಾಲ್ ಬೆಳ್ಳಾರೆ ಲತೀಫ್ ಕೋಡಿಜಾಲ್,ಹಾರೀಸ್ ಮಲಾರ್, ಝಾಕೀರ್ ಉಳ್ಳಾಲ, ಕೌನ್ಸೀಲರ್ ರಮೀಝ್,ನಿಝಾಂ ಉಳ್ಳಾಲ,ಇರ್ಶಾದ್ ಅಜ್ಜಿ ನಡ್ಕ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *