Header Ads
Breaking News

ಪೌರತ್ವ ತಿದ್ದುಪಡಿ ವಿಚಾರ ಅನೇಕರು ಪ್ರತಿಭಟನೆಗೆ ಅವಕಾಶ ಕೇಳಿದ್ದಾರೆ : ಡಾ.ಪಿ.ಎಸ್.ಹರ್ಷ ಹೇಳಿಕೆ

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿಗೆ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಅನೇಕರು ಪ್ರತಿಭಟನೆಗೆ ಅವಕಾಶ ಕೇಳಿದ್ದಾರೆ. ನಾವು ಅಂತಹ ಅರ್ಜಿಗಳನ್ನು ಪರಿಶೀಲಿಸಿದ್ದೇವೆ.ಈಗಾಗಲೇ 8 ಅರ್ಜಿಗಳು ಪ್ರತಿಭಟನೆಗೆ ಅವಕಾಶ ಕೇಳಿವೆ. ಕೆಲವು ಸಂಘಟನೆಗಳು ಅನುಮತಿ ಇಲ್ಲದೆ ಪ್ರತಿಭಟನೆ ಮಾಡಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯನ್ನುಂಟು ಮಾಡಿದ್ದಾರೆ. 38 ಮಂದಿ ವಿರುದ್ಧ ಕೇಸ್ ದಾಖಲಿಸಿದ್ದೇವೆ ಎಂದು ಮಂಗಳೂರು ಪೊಲೀಸ್ ಕಮಿಶನರ್ ಡಾ. ಪಿ.ಎಸ್. ಹರ್ಷಾ ಹೇಳಿದರು.

ಅವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಡಿ.20 23ರಂದು ಬೃಹತ್ ಪ್ರತಿಭಟನೆ ಇದೆ ಎಂದು ಮೆಸೇಜ್ ರವಾನಿಸಿದ್ದಾರೆ. ನಾವು ಅದರಲ್ಲಿದ್ದ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿದ್ದೇವೆ. ಮಂಗಳೂರು ಖಾಝಿಯವರ ಫೋಟೋ ಹಾಕಿ ಪೋಸ್ಟರ್ ಹಾಕಿದ್ದರು. ಡಿ.20 ರಂದು ಮಂಗಳೂರಲ್ಲಿ ಮುಸ್ಲಿಂ ಸಂಘಟನೆಯಿಂದ ಪ್ರತಿಭಟನೆ ಇಲ, ಮುಸ್ಲಿಂ ಧಾರ್ಮಿಕ ಮುಖಂಡರುಗಳನ್ನು ಕರೆದು ಚರ್ಚಿಸಲಾಗಿದೆ. ಸಾಮರಸ್ಯ ಹಾಳು ಮಾಡಲು ಕೆಲವರಿಂದ ತಂತ್ರ ನಡೆಯುತ್ತಿದೆ. ಅಭಿಪ್ರಾಯ ವ್ಯಕ್ತಪಡಿಸಲು ಕಾನೂನು ಪ್ರಕಾರ ಅವಕಾಶ ಇದೆ. ಕಾನೂನು ಬದ್ದ ಪ್ರತಿಭಟನೆಗೆ ಅವಕಾಶ ಕೊಡುತ್ತೇವೆ. ಇದೊಂದು ಸೂಕ್ಷ್ಮವಾದ ಸನ್ನಿವೇಶವಾಗಿದೆ. ಶಾಂತಿ ಕಾಪಾಡುವಂತೆ ಎಲ್ಲಾ ಧರ್ಮದ ಮುಖಂಡರಲ್ಲಿ ಮನವಿ ಮಾಡಿದ್ದೇವೆ. ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಹೇಳಿದರು.

Related posts

Leave a Reply

Your email address will not be published. Required fields are marked *