Header Ads
Breaking News

ಪೌರತ್ವ ತಿದ್ದು ಪಡಿ ಕಾನೂನನನ್ನು ವಿರೋಧಿಸುವುದಿಲ್ಲ ಬದಲಾಗಿ ಅದರಲ್ಲಿ ಇರುವ ಅಂಶಗಳನ್ನು ವಿರೋಧ : ತಾಹೀರ್ ಹುಸೇನ್

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದು ಪಡಿ ಕಾನೂನನನ್ನು ವೆಲ್‍ಫೇರ್ ಪಾರ್ಟಿ ಆಪ್ ಇಂಡಿಯಾ ವಿರೋಧಿಸುವುದಿಲ್ಲ ಬದಲಾಗಿ ಅದರಲ್ಲಿ ಇರುವ ಅಂಶಗಳನ್ನು ವಿರೋಧಿಸುವುದಾಗಿ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೀರ್ ಹುಸೇನ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಬಾಂಗ್ಲಾ, ಪಾಕಿಸ್ಥಾನದ ಅಲ್ಪ ಸಂಖ್ಯಾತರಿಗೆ ಪೌರತ್ವ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಮೊದಲು ಅಲ್ಲಿರುವ ಅಲ್ಪಸಂಖ್ಯಾತ ಹಿಂಸೆಗೆ ಒಳಗಾದವರಿಗೆ ಇಲ್ಲಿನ ಪೌರತ್ವ ಅಂತ ವಿಶ್ಲೇಷಿಸಲಾಗಿತ್ತು.ಆದ್ರೆ ಈಗ ಅಂತ ಯಾವುದೇ ಅಂಶಗಳು ಈ ಕಾಯಿದೆಯಲ್ಲಿ ಕಾಣಿಸುತ್ತಿಲ್ಲ. ಸರಕಾರ ತರಲು ಉದ್ದೇಶಿಸಿರುವ ಸಿಟಿಜನ್ ಶಿಪ್ ಎಮೆಂಡ್ ಮೆಂಡ್ ಆಕ್ಟ್ ನಲ್ಲಿ 2014ರ ಡಿಸೆಂಬರ್ 31 ರ ಒಳಗೆ ಬರುವ ಎಲ್ಲಾ ನಾಗರೀಕರಿಗೆ ಪೌರತ್ವ ನೀಡುವ ಬಗ್ಗೆ ಹೇಳಿದೆ ಆದ್ರೆ ಉಳಿದವರಿಗೆ ಪೌರತ್ವದ ಬಗ್ಗೆ ಏನೂ ಹೇಳಿಲ್ಲ ಆದ್ದರಿಂದ ಈ ದಿನಾಂಕದ ಬಗ್ಗೆ ನಮ್ಮ ಸಂಘಟನೆ ವಿರೋಧ ವ್ಯಕ್ತಪಡಿಸುತ್ತಿದ್ದು ಈಗಾಗಲೇ ಈ ಬಗ್ಗೆ ಸುಪ್ರೀಂ ಕೋರ್ಟ್‍ನಲ್ಲಿ ಈ ಬಗ್ಗೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಪೆಬ್ರವರಿ 10 ರಂದು ಬೃಹತ್ ಮಟ್ಟದ ಪಾರ್ಲಿಮೆಂಟ್ ಚಲೋ ಅನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Related posts

Leave a Reply

Your email address will not be published. Required fields are marked *