Header Ads
Breaking News

ಪೌರತ್ವ ಹೋರಾಟದ ಮುಂದಿನ ನಡೆ : ಫೆ.8-9 ಸಿಎಫ್‍ಐ ರಾಜ್ಯಪ್ರತಿನಿಧಿ ಸಭೆ

ಪುತ್ತೂರು; ಪೌರತ್ವ ಕಾಯಿದೆ ವಿರುದ್ಧ ದೇಶದಾದ್ಯಂತ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಕಾಯಿದೆ ಜಾರಿ ಮಾಡುವ ವಿಚಾರದಲ್ಲಿ ಹಿಂದೆ ಸರಿದಿಲ್ಲ. ಈ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಈ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸುವ ಉದ್ದೇಶದಿಂದ `ಅಸ್ಮಿತೆಗಾಗಿ ಪ್ರತಿರೋಧ’ ಘೋಷಣೆಯೊಂದಿಗೆ ಫೆ.8 ಮತ್ತು 9ರಂದು ಪುತ್ತೂರು ತಾಲೂಕು ಪ್ರೀಡಂ ಕಮ್ಯೂನಿಟಿ ಸಭಾಭವನ ಮಿತ್ತೂರು ಎಂಬಲ್ಲಿ ರಾಜ್ಯಪ್ರತಿನಿಧಿ ಸಭೆ ನಡೆಯಲಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅಶ್ವಾನ್ ಸಾದಿಕ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಈ ರಾಜ್ಯ ಪ್ರತಿನಿಧಿ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ವಿಶ್ವವಿದ್ಯಾಲಯಗಳಿಂದ ಸುಮಾರು 450 ಮಂದಿ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಪೌರತ್ವ ತಿದ್ದುಪಡಿ ಕಾಯಿದೆಯ ಮುಂದಿನ ಹೋರಾಟ, ರಾಷ್ಟ್ರೀಯ ಶಿಕ್ಷಣ ನೀತಿ, ಬೀದರಿನ ಸಂಸ್ಥೆ ಮೇಲೆ ಹಾಕಿರುವ ದೇಶದ್ರೋಹದ ಪ್ರಕರಣ, ಮಂಗಳೂರಿನ ಪೆÇಲೀಸ್ ಗೋಲಿಬಾರ್ ಮತ್ತಿತರ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಈ ಸಭೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೂಫ್ ಷರೀಫ್, ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ, ಪ್ರಧಾನ ಕಾರ್ಯದರ್ಶಿ ಸ್ವರಕತ್ ಶಾ, ಉಪಾಧ್ಯಕ್ಷ ಆರೀಫ್ ಶಿವಮೊಗ್ಗ ಮತ್ತಿತರರು ಭಾಗಿಯಾಗಲಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿ.ಜೆ, ಜಿಲ್ಲಾ ಮುಖಂಡ ಸವಾದ್ ಕಲ್ಲರ್ಪೆ, ರಾಜ್ಯ ಕನ್ವೀನರ್ ಅನೀಸ್ ಅಹಮ್ಮದ್, ರಾಜ್ಯ ಸಮಿತಿ ಸದಸ್ಯೆ ಮುಫೀದಾ ರಹ್ಮಾನ್ ಹಾಜರಿದ್ದರು.

Related posts

Leave a Reply

Your email address will not be published. Required fields are marked *