Header Ads
Header Ads
Breaking News

ಪ್ಯಾರಿಸ್‌ನಲ್ಲಿ ಮೊದಲ ಮಹಿಳೆಯ ವರ್ಣಿಸಿದ ಟ್ರ್ಂಪ್, ಅಮೆರಿಕಧ್ಯಕ್ಷರ ಮನಸ್ಥಿತಿ ಪ್ರಶ್ನಿಸಿದ ಜಾಲ ಪಯಣಿಗರು

 

ನಿಮ್ಮ ದೇಹದ ಆಕಾರ ತುಂಬಾ ಚೆನ್ನಾಗಿದೆ. ನೀವು ತುಂಬಾ ಸುಂದರವಾಗದ್ದೀರಿ ಎಂದು ಫ್ರಾನ್ಸ್ ಅಧ್ಯಕ್ಷರ ಪತ್ನಿಯನ್ನು ಹೊಗಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.
ಫ್ರಾನ್ಸ್ ಪ್ರವಾಸದಲ್ಲಿರುವ ಡೊನಾಲ್ಡ್ ಟ್ರಂಪ್ ಅವರು ಏಕಾ‌ಏಕಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಅವರ ಪತ್ನಿ ಬಿಗ್ಗಟೆ ಮ್ಯಾಕ್ರನ್ ಅವರನ್ನು ಹೊಗಳಿ ಬಿಟ್ಟರು. ಈ ಹೊಗಳಿಕೆಯ ಮಾತುಗಳು ಕ್ಯಾಮೆರದಲ್ಲಿ ಸೆರೆಯಾಗಿವೆ. ಟ್ರಂಪ್ ಅವರು ಮಿಸಸ್ ಮ್ಯಾಕ್ರನ್ ಅವರನ್ನು ಹೊಗಳುತ್ತಿರುವ ವಿಡಿಯೊ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲ ತಾಣಗಳಲ್ಲಿ ಟ್ರಂಪ್ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಟ್ರಂಪ್ ಅವರ ಹೊಗಳಿಕೆ ಸೆಕ್ಸಿಯಾಗಿತ್ತು ಎಂದು ಕೆಲವರು ಟೀಕಿಸಿದ್ದಾರೆ. ಇದು ಟ್ರಂಪ್ ಅವರ ಕೊಳಕು ಮನಸ್ಥಿತಿಯನ್ನು ತೋರುತ್ತದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಇನ್ನು ಕೆಲವರು, ಟ್ರಂಪ್ ಒಬ್ಬ ವಿಕೃತಕಾಮಿ ಎಂದು ಟ್ವೀಟ್ ಮಾಡಿದ್ದಾರೆ.

Related posts

Leave a Reply