Header Ads
Header Ads
Breaking News

ಪ್ಯಾರಿಸ್‌ನಿಂದ ಬಂದು ಸಿಂಗಾಪುರದಲ್ಲಿ ಗೆದ್ದ ಭಾರತೀಯ, ರಾಮ್‌ಕುಮಾರ್‌ಗೆ ಫ್ಯೂಚರ್ಸ್ ಟೆನ್ನಿಸ್ ಪ್ರಶಸ್ತಿ

ಭಾರತದ ರಾಮ್ಕುಮಾರ್ ರಾಮನಾಥನ್ ಸಿಂಗಪುರದಲ್ಲಿ ನಡೆದ ಐಟಿ‌ಎಫ್ ಪುರುಷರ ಫ್ಯೂಚರ್ಸ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಭಾರತದ ಆಟಗಾರ ೬-೨, ೬-೨ರಲ್ಲಿ ನೇರ ಸೆಟ್ಗಳಿಂದ ಎರಡನೇ ಶ್ರೇಯಾಂಕದ ಅಮೆರಿಕದ ರೆಮಂಡ್ ಸರ್ಮಿಯೆಂಟೊ ಅವರನ್ನು ಮಣಿಸಿದರು. ವೃತ್ತಿಜೀವನದಲ್ಲಿ ೧೫ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಭಾರತದ ಆಟಗಾರ ಈ ಋತುವಿನಲ್ಲಿ ಮೊದಲ ಬಾರಿ ಚಾಂಪಿಯನ್ ಆಗುವ ಮೂಲಕ ಶುಭಾರಂಭ ಮಾಡಿದ್ದಾರೆ.
ಡೇವಿಸ್ ಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ರಾಮ್ಕುಮಾರ್ ಇತ್ತೀಚೆಗೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನಲ್ಲೇ ಸೋಲು ಕಂಡು ಹೊರಬಿದ್ದಿದ್ದರು.

Related posts

Leave a Reply