Header Ads
Breaking News

ಪ್ರಕಾಶ್ ರೈ ವಿರುದ್ಧ ದಿನೇಶ್ ಮಟ್ಟು ಗರಂ!!

ಪ್ರಕಾಶ್ ರೈ ಬಿಜೆಪಿಯನ್ನು ಕ್ಯಾನ್ಸರ್ ಎಂದು ಹೇಳುತ್ತಿದ್ದರು. ಆದ್ರೆ ರೈ ಗೆ ಈಗ ಕಾಂಗ್ರೆಸ್ ಕೂಡಾ ಕ್ಯಾನ್ಸರ್ ಥರ ಕಾಣ್ಸುತ್ತೆ. ಪ್ರಕಾಶ್ ರೈ ಈಗ ಮತ ವಿಭಜನೆಗೆ ಹೊರಟಿದ್ದಾರೆ ಎಂದು ಪ್ರಕಾಶ್ ರೈ ವಿರುದ್ದ ಚಿಂತಕ ದಿನೇಶ್ ಅಮಿನ್ ಮಟ್ಟು ಗರಂ ಆದ್ರು.

ಉಡುಪಿಯಲ್ಲಿ ಸಹಬಾಳ್ವೆ ಸಂಸ್ಥೆ ಆಯೋಜಿಸಿದ್ದ ಸರ್ವಜನೋತ್ಸವ ಕಾರ್ಯಕ್ರಮದಲ್ಲಿ ಅವರು ಪ್ರಕಾಶ್ ರೈ ವಿರುದ್ದ ಆಕ್ರೋಶ ಹೊರಹಾಕಿದ್ರು. ಇನ್ನು ಈ ವೇಳೆ ಪೇಜಾವರ ಶ್ರೀಗಳ ವಿರುದ್ದ ಅಸಮಧಾನ ಹೊರಹಾಕಿದ ದಿನೇಶ್ ಅಮಿನ್ ಮಟ್ಟು, ಉಡುಪಿ ಕೃಷ್ಣ ಮಠದಲ್ಲೂ ರಾಜಕೀಯ ಇದೆ. ಪೇಜಾವರ ಸ್ವಾಮಿಗಳು ಹಿಂದು ಯಾರು ಅಂತ ಹೇಳಬೇಕು. ಬಿಜೆಪಿ ಶಾಸಕ ರಘುಪತಿ ಭಟ್ ನಿಜವಾದ ಹಿಂದೂ ಅಥವಾ ಕಾಂಗ್ರೆಸ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಿಂದೂವಾ ಎಂದು ಪೇಜಾವರ ಶ್ರೀಗಳು ಹೇಳಬೇಕು. ಒಂದು ಪಕ್ಷದ ಪರ ಬೆಂಬಲ ನೀಡುವ ಮೂಲಕ ಹಿಂದೂಗಳ ಪರ ಅಂತ ಧರ್ಮ ದ್ರೋಹ ಮಾಡ್ಬೇಡಿ ಎಂದು ಪೇಜಾವರ ಶ್ರೀಗಳ ವಿರುದ್ದ ಕಿಡಿಕಾರಿದ್ರು. ಹಿಂದೂ ಧರ್ಮ ಉಳಿದದ್ದು ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯರಿಂದಲ್ಲ. ಹಿಂದೂ ಧರ್ಮದಲ್ಲಿ ನಡೆದ ಪ್ರತಿಭಟನಾ ಚಳುವಳಿಗಳಿಂದ ಧರ್ಮ ಉಳಿದಿದೆ. ಕ್ರೈಸ್ತರು, ಮುಸ್ಲೀಂಮರು ಕೂಡಿ ಕಟ್ಟಿದ ಕರಾವಳಿಯನ್ನು ಈಗ ಒಡೆಯಲಾಗುತ್ತಿದೆ. ಹಿಂದೂಗಳು ಅಂದ್ರೆ ಯಾರು ಆರ್ ಎಸ್ ಎಸ್ ಡಿಫೈನ್ ಮಾಡಿ. ಮುಖವಾಡ ಹಾಕಿ ರಾಜಕೀಯ ಮಾಡಬೇಡಿ. ಆರ್ ಎಸ್ ಎಸ್ ನೇರ ಚುನಾವಣೆ ಗೆ ಬರಲಿ. ಆರ್ ಎಸ್ ಎಸ್ ನ ದ್ದು ಛದ್ಮವೇಷದ ರಾಜಕೀಯ. ದೇವೇಗೌಡರಷ್ಟು ದೊಡ್ಡ ಹಿಂದು ಯಾರಿದ್ದಾರೆ? ಅವರನ್ನು ಆರ್ ಎಸ್ ಎಸ್ ಬೆಂಬಲಿಸುತ್ತಾ. ನಾವು ಮೀನು ತಿಂದೇ ದೇವಸ್ಥಾನಕ್ಕೆ ಹೋಗ್ತೇವೆ. ನಮಗೆ ರಾಮ- ಕೃಷ್ಣ, ಶಿವ ಮಾತ್ರವಲ್ಲ, ದೈವಗಳೂ ದೇವರೇ. ಪಂಜುರ್ಲಿ- ಜುಮಾದಿ ಕೋರ್ದಬ್ಬುವನ್ನು ನಂಬುತ್ತೇವೆ. ನಮ್ಮ ದೈವಗಳು ಪ್ರಜಾಪ್ರಭುತ್ವವಾದಿಗಳು. ದೇವರು ಮತ್ತು ಭಕ್ತರ ಸಂಬಂಧಗಳ ನಾಡು ಕರಾವಳಿ. ನಿಮ್ಮ ಹಿಂದುತ್ವ ರಾಮನಿಗೆ ಸೀಮಿತವಾ?. ಆರ್ ಎಸ್ ಎಸ್ ನಲ್ಲಿ ಯಾವ ಜಾತಿಯವರಿದ್ದಾರೆ? ಮೀನು ಮಾಂಸ ತಿನ್ನುವ ವರು ಆರ್ ಎಸ್ ಎಸ್ ಯಾವ ಹುದ್ದೆಯಲ್ಲಿದ್ದಾರೆ ಎಂದು ಆರ್ ಎಸ್ ಎಸ್ ತಿಳಿಸಬೇಕು ಎಂದು ಈ ವೇಳೆ ಪ್ರಶ್ನಿಸಿದ್ರು.

Related posts

Leave a Reply

Your email address will not be published. Required fields are marked *