Header Ads
Breaking News

ಪ್ರಕೃತಿಯಲ್ಲಿ ತಾಯ್ತನ ಕಂಡು ಉಳಿಸಿ ಬೆಳೆಸಬೇಕು: ಸೀತಾರಾಮ ಕೆದಿಲಾಯ ಹೇಳಿಕೆ

ಬಂಟ್ವಾಳ: ಪ್ರಕೃತಿಯಲ್ಲಿ ತಾಯ್ತನವನ್ನು ಕಂಡು ಅದನ್ನು ಉಳಿಸಿ ಬೆಳೆಸಬೇಕು. ತಾಯ್ತನವನ್ನು ಗುರುತಿಸುವ ದೃಷ್ಟಿ ನಮ್ಮಲ್ಲಿರಬೇಕು ಎಂದು ಭಾರತ ಪರಿಕ್ರಮ ಯಾತ್ರೆ ಮಾಡಿದ ಸೀತಾರಾಮ ಕೆದಿಲಾಯ ಹೇಳಿದರು. ಶ್ರೀರಾಮ ನಾಮ ತಾರಕ ಜಪ ಯಜ್ಞ ಸಮಿತಿ ತುಂಬೆ ಇದರ ಆಶ್ರಯ ದಲ್ಲಿ ಕಳ್ಳಿಗೆ ಗ್ರಾಮದ ಪೆರಿಯೊಡಿ ಬೀಡುವಿನಲ್ಲಿ ಎ.7ರಂದು ನಡೆಯಲಿರುವ ಶ್ರಿರಾಮ ನಾಮ ತಾರಕ ಜಪ ಯಜ್ಞದ ಪೂರ್ವಭಾವಿಯಾಗಿ ಬ್ರಹ್ಮರಕೂಟ್ಲುವಿನ ಶ್ರೀ ಮೂಕಾಂಬಿಕ ರಾಮ ಭಜನಾ ಮಂದಿರದಲ್ಲಿ ಬುಧವಾರ ಸಂಜೆ ನಡೆದ ರಾಮ ಕಾರ್ಯ ರಾಷ್ಟ್ರ ಕಾರ್ಯ ಎನ್ನುವ ಕಾರ್ಯಕ್ರಮದಲ್ಲಿ ಅವರು ವಿಶೇಷ ಧಾರ್ಮಿಕ ಉಪನ್ಯಾಸ ನೀಡಿದರು. ಗ್ರಾಮಗಳು ದೇಶದ ಆತ್ಮಗಳಿದ್ದಂತೆ, ಪ್ರಕೃತಿಯ ರಕ್ಷಣೆಯಾದರೆ ಹಳ್ಳಿಗಳ ರಕ್ಷಣೆಯಾಗುತ್ತದೆಹಳ್ಳಿಗಳ ರಕ್ಷಣೆಯಾದರೆ ದೇಶ ರಕ್ಷಣೆಯಾಗುತ್ತದೆ. ದೇಶ ರಕ್ಷಣೆಯಾದರೆ ಪ್ರಪಂಚ ಶಾಂತಿಯಿಂದಿರುತ್ತದೆ ಎಂದರು. ಸಮಿತಿಯ ಅಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ ವೇದಿಕೆಯಲ್ಲಿದ್ದರು.

Related posts

Leave a Reply

Your email address will not be published. Required fields are marked *