Breaking News

ಪ್ರಕೃತಿ ಪರಿಸರ ರಕ್ಷಿಸಲು ವಿದ್ಯಾರ್ಥಿಗಳು ಮುಂದೆ ಬರಬೇಕು, ಕೇರಳ ರಾಜ್ಯ ಬಂದರು ಖಾತೆ ಸಚಿವ ರಾಮಚಂದ್ರ ಹೇಳಿಕೆ

ಪ್ರಕೃತಿ ಪರಿಸರವನ್ನು ವಿನಾಸದಿಂದ ರಕ್ಷಿಸಲು ವಿದ್ಯಾರ್ಥಿಗಳು ಮುಂದೆ ಬರಬೇಕೆಂದು ಕೇರಳ ರಾಜ್ಯ ಬಂದರು ಖಾತೆ ಸಚಿವ ರಾಮಚಂದ್ರ ಕಡನಪ್ಪಳಿ ಹೇಳಿದರು.
ಈ ಬಗ್ಗೆ ಪೋಷಕರು ಹಾಗೂ ಅಧ್ಯಾಪಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕೆಂದು ಅವರು ಹೇಳುವುದರೊಂದಿಗೆ ಪರಿಸರ ರಕ್ಷಣಾ ಕಾರ್ಯದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರು ವಿನಂತಿಸಿಕೊಂಡರು. ಪರಿಸರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಶಾಸಕ ಎನ್. ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಜಿಲ್ಲಾ ಮಟ್ಟದ ಪರಿಸರ ವಾರಾಚರಣೆಯ ಸಮಾರೋಪ ಸಮಾರಂಭದಲ್ಲಿ ರಾಜ್ಯ ಯುವಜನ ಕ್ಷೇಮ ಮಂಡಳಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಭೂ ಮಿತ್ರ ಸೇನೆ, ಎನ್. ಎಸ್. ಎಸ್. ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜನಪ್ರತಿನಿಧಿಗಳು, ಅಧ್ಯಾಪಕರುಗಳು ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Related posts

Leave a Reply