Header Ads
Header Ads
Header Ads
Breaking News

ಪ್ರಕೃತಿ ಮೇಲೆ ಮನುಷ್ಯರು ನಡೆಸುತ್ತಿರುವ ಅತ್ಯಾಚಾರ ವಿರುದ್ದ ಜನ ಜಾಗೃತಿ ಮೂಡಿಸಲು ಕಾಸರಗೋಡಿನಿಂದ ತಿರುವನಂತಪುರಕ್ಕೆ ಯಾತ್ರೆ

ಕಾಸರಗೋಡು: ಪ್ರಕೃತಿ ಮೇಲೆ ಮನುಷ್ಯರು ನಡೆಸುತ್ತಿರುವ ಅತ್ಯಾಚಾರ ವಿರುದ್ದ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ಬಂಜರು ಭೂಮಿಯಾಗಿರುವ ಕೇರಳಕ್ಕೆ ಆಸರೆಯಾಗಲು ಉತ್ಸಾಹದಿಂದ ಮುನ್ನುಗ್ಗೋಣ ಎಂಬ ಸಂದೇಶದೊಂದಿಗೆ ಸಂಭೋದ್ ಪೌಂಡೇಶನ್ ಕೇರಳ ಇದರ ವತಿಯಿಂದ ಕಾಸರಗೋಡಿನಿಂದ ತಿರುವನಂತಪುರದ ವರೆಗೆ ಹರಿತಾದ್ರದ ಸಾಂತನಂ 2017 ಎಂಬ ಕೇರಳ ಯಾತ್ರೆ ನಾಳೆ ರವಿವಾರ ಆರಂಭಗೊಳ್ಳಲಿರುವುದಾಗಿ ಸಂಬಂಧಪಟ್ಟವರು ಸುದ್ದಿ ಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಚೈತನ್ಯ ವಿದ್ಯಾಲಯದ ಕ್ಷೇತ್ರದಿಂದ ಚಾಲನೆಗೊಳ್ಳಲಿರುವ ಯಾತ್ರೆಗೆ ಸಚಿವ ಇ ಚಂದ್ರಸೇಖರನ್ ಚಾಲನೆ ನೀಡಲಿದ್ದಾರೆ.

ನಾಳೆ ಆರಂಭಗೊಳ್ಳಲಿರುವ ಯಾತ್ರೆ ವಿವಿಧ ಜಿಲ್ಲೆಯಲ್ಲಿ ಪರ್ಯಟನೆ ನಡೆಸಿ ಅಕ್ಟೋಬರ್ ೬ ರಂದು ತಿರುವನಂತಪುರದಲ್ಲಿ ಸಮಾಪ್ತಿಗೊಳ್ಳಲಿರುವುದಾಗಿ ತಿಳಿಸಿದ್ದಾರೆ.

ಪತ್ರಿಕಾ ಗೋಷ್ಟಿಯಲ್ಲಿ ಡಾ. ಬಿ ಎಸ್ ರಾವ್, ಉಷ ಮೆನೋನ್, ರಾಜೇಂದ್ರ ಮೊದಲದವರು ಉಪಸ್ಥರಿದ್ದರು.

Related posts

Leave a Reply