Header Ads
Header Ads
Breaking News

ಪ್ರಕೃತಿ ವಿಕೋಪಕ್ಕೆ ತುತ್ತಾದ ವಯೋವೃದ್ಧೆಯ ಸೂರು…

ಇದ್ದ ಮೂರು ಮಂದಿ ಗಂಡು ಮಕ್ಕಳನ್ನು ಕಳೆದುಕೊಂಡು, ಇದೀಗ ಒಂಟಿ ಜೀವನ ನಡೆಸುತ್ತಿರುವ ವಯೋವೃದ್ಧೆಗೆ ಸರ್ಕಾರದ ಸಂಧ್ಯಾ ಸುರಕ್ಷ ಯೋಜನೆಯೇ ಜೀವನಾಧಾರ, ಇದೀಗ ಇದ್ದ ಇರುಕು-ಮುರುಕು ಸೊರೊಂದು ಕಳೆದ ರಾತ್ರಿ ಬೀಸಿದ ಮಳೆಗಾಳಿಗೆ ಬಹುತೇಕ ಹಾನಿಯಾಗಿದ್ದು, ನಿರ್ಗತಿಕರಾದ ಇವರು ಇದ್ದ ಸೂರನ್ನೂ ಕಳಕೊಂಡು ಬೀದಿಗೆ ಬೀಳುವ ಸಾಧ್ಯತೆಯೇ ಅಧಿಕವಾಗಿದೆ.   ತೆಂಕ ಎರ್ಮಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಮನೆ ಎಂಬಲ್ಲಿ ವಾಸವಾಗಿರುವ ಸುಂದರಿ ಶೇರಿಗಾರ್‍ತಿ ಎಂಬವರೇ ಈ ನತದೃಷ್ಟೆ, ಕೊನೆಯ ದಿನಗಳಲ್ಲಿ ಆಧಾರವಾಗ ಬೇಕಾಗಿದ್ದ ಮಕ್ಕಳನ್ನು ಕಳೆದುಕೊಂಡು ಇವರು ಇದೀಗ ಒಬ್ಬೊಂಟಿ, ಇವರಿಗೆ ರಾಜ್ಯ ಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆಯಿಂದ ತಿಂಗಳಿಗೆ ದೊರಕುವ ಐದುನೂರು ರೂಪಾಯಿಯೇ ಜೀವನಾಧಾರ. ಕಾರಣಕ್ಕೆ ತಿಂಗಳ ಹಣ ಕೈ ಸೇರದಿದ್ದರೆ ಹೊಟ್ಟೆಗೆ ಒದ್ದೆ ಬಟ್ಟೆ ಖಾಯಂ ಎಂಬಸ್ಥಿತಿ. ಈ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದ ಈ ವಯೋವೃಧೆಗೆ ಮತ್ತೊಂದು ಶೋಕ್.. ಇದ್ದ ಮುರುಕಲು ಮನೆಯೋ ಕಳೆದ ರಾತ್ರಿ ಬೀಸಿದ ಮಳೆಗಾಳಿಗೆ ತುತ್ತಾಗಿದೆ.

ತಕ್ಷಣವೇ ಇದನ್ನು ದುರಸ್ಥಿ ಪಡಿಸದಿದ್ದಲ್ಲಿ ಮನೆ ಸಂಪೂರ್ಣ ಕುಸಿದು ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಸ್ಥಳೀಯರ ನೆರವಿನಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೆ ಮನೆ ದುರಸ್ಥಿಗೆ ಯಾವುದೇ ಅನುದಾನವಿಲ್ಲ, ಹೊಸ ಮನೆ ನಿರ್ಮಿಸುವುದಾದರೆ ಒಂದು ಲಕ್ಷ ಇಪ್ಪತ್ತೈದು ಸಾವಿರ ದೊರೆಯುತ್ತದೆ ಎಂಬುದಾಗಿ ಸರ್ಕಾರದ ಯೋಜನೆಯ ಬಗ್ಗೆ ಮಾಹಿತಿ ನೀಡಿ ಮರಳಿದ್ದಾರೆ. ಆದರೆ ಇಲ್ಲಿ ಹೊಟ್ಟೆ ತುಂಬಿಸುವುದೇ ಕಷ್ಟ ಎಂಬ ಸ್ಥಿತಿಯಲ್ಲಿ ಹೊಸ ಮನೆಯ ಬಗ್ಗೆ ಕನಸು ಕಾಣಲೂ ಅಸಾಧ್ಯವಾಗಿರುವ ಈ ವಯೋವೃದ್ಧೆಗೆ ಸಹಾಯ ಮಾಡುವವರ್‍ಯಾರು..? ಅಂತಿಮವಾಗಿ ಪ್ರಕೃತಿ ವಿಕೋಪದಡಿಯಲ್ಲಿ ಜಿಲ್ಲಾಢಳಿತ ಈ ವಯೋವೃದ್ಧೆಗೆ ಆಧಾರವಾಗುವ ಮೂಲಕ ಈ ವಯೋವೃದ್ಧೆಯ ಕಣ್ಣೀರು ಒರೆಸುವ ಕೆಲಸ ಮಾಡ ಬೇಕಾಗಿದೆ.

Related posts

Leave a Reply