Header Ads
Header Ads
Breaking News

ಪ್ರಕೃತಿ ವಿಕೋಪ ಹಿನ್ನೆಲೆ ಸಂತ್ರಸ್ತರಿಗೆ ಅಹಾರ ಉತ್ಪನ್ನಗಳ ರವಾನೆ. ಮಂಜೇಶ್ವರ ಬ್ಲೋಕ್ ಪಂಚಾಯತ್ ವತಿಯಿಂದ ಸಹಾಯ ಹಸ್ತ .

ಮಂಜೇಶ್ವರ: ಪ್ರಳಯದಿಂದ ಸಂಕಷ್ಟ ಅನುಭವಿಸುತ್ತಿರುವ ತೆಂಕಣ ಕೇರಳದ ಜನತೆಗೆ ಸಹಾಯಕವಾಗಿ ಮಂಜೇಶ್ವರ, ವರ್ಕಾಡಿ, ಮೀಂಜ ಮಂಗಲ್ಪಾಡಿ ಸೇರಿದಂತೆ ಎಂಟು ಗ್ರಾಮ. ಪಂಚಾಯತ್‌ಗಳ, ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಂಜೇಶ್ವರ ಬ್ಲೋಕ್ ಪಂಚಾಯತಿನ ನೇತೃತ್ವದಲ್ಲಿ ಸಂಗ್ರಹಿಸಲಾದ ಭಾರೀ ಪ್ರಮಾಣದ ಬಟ್ಟೆ ಬರೆ, ಆಹಾರ ಸಾಮಾಗ್ರಿ, ಕುಡಿಯುವ ನೀರು ಮೊದಲಾದ ಉತ್ಪನ್ನಗಳನ್ನು ಬಾನುವಾರದಂದು ವಾಹನದ ಮೂಲಕ ಕಳುಹಿಸಿ ಕೊಡಲಾಯಿತು.ಈ ಸಂದರ್ಭ ಬ್ಲೋಕ್ ಪಂಚಾಯತ್ ಅಧ್ಯಕ್ಷ ಎ ಕೆ ಎಂ ಅಶ್ರಫ್, ಉಪಾಧ್ಯಕ್ಷೆ ಮಮತಾ ದಿವಾಕರ್, ಮುಸ್ತಫ ಉದ್ಯಾವರ. ಗ್ರಾ. ಪಂ. ಅಧ್ಯಕ್ಷ ಅಝೀಝ್ ಹಾಜಿ, ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಾಹುಲ್ ಹಮೀದ್, ಕೆ ಆರ್ ಜಯಾನಂದ, ದಯಾಕರ ಮಾಡ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನೇತಾರರು, ಸಂಘಟನೆಯ ನೇತಾರು ಸೇರಿದಂತೆ ಹಲವಾರು ಗಣ್ಯರು ಉಪಸ್ಥರಿದ್ದರು.

Related posts

Leave a Reply