Header Ads
Header Ads
Breaking News

ಪ್ರಗತಿಪರರು ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ -ಪೇಜಾವರ ಶ್ರೀ

ಪ್ರಗತಿಪರರು ಇದುವರೆಗೂ ನನ್ನ ಅರ್ಥ ಮಾಡಿಕೊಂಡಿಲ್ಲ ಎಂದು ಪೇಜಾವರ ಶ್ರೀ ಹೇಳಿದ್ದಾರೆ . ಉಡುಪಿಯಲ್ಲಿ ಮಾತನಾಡಿದ ಅವರು, ರಾಮ ಜನ್ಮಭೂಮಿ ವಿವಾದಕ್ಕೆ ಪರಿಹಾರವಿದೆ ಕೋರ್ಟ್ ಅನುಮತಿ ನೀಡಿದೆ ಈ ಬಗ್ಗೆ ಸಾಕಷ್ಟು ಪುರಾವೆಗಳಿವೆ ಅದು ನಮ್ಮ ಹಕ್ಕು ರಾಮ ಜನ್ಮಭೂಮಿ ವಿಚಾರವಾಗಿ ಭಿನ್ನಾಭಿಪ್ರಾಯವಿದ್ದರೆ ಸೌಹಾರ್ದಕೂಟ ನಡೆಸಬಾರದು ಎಂಬ ಪ್ರಗತಿ ಪರರ ಮಾತಿಗೆ ಅರ್ಥವಿಲ್ಲ. ಭಿನ್ನಾಭಿಪ್ರಾಯ ಹಿಂಸೆ ಬೇಡ ಅಂತ ಹೇಳುವ ಜಾತ್ಯಾತೀತರು ಹಿಂಸೆ ಬೇಡ ಎಂದು ಕಾಶ್ಮೀರವನ್ನು ಪಾಕಿಸ್ಥಾನಕ್ಕೆ ಬಿಟ್ಟುಕೊಡ್ಬೇಕಾ ಎಂದು ಪ್ರಶ್ನಿಸಿದ್ದಾರೆ.
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಗತಿಪರರು ನನ್ನ ಅರ್ಥ ಮಾಡಿಕೊಳ್ಳಿ ದೇಶದಲ್ಲಿ ಎಲ್ಲರಿಗೂ ಸಮಾನತೆ ಇರಬೇಕು ಹಿಂಸೆಗೆ ಪ್ರಚೋದನೆ ಇಲ್ಲ ಬಹುಸಂಖ್ಯಾತರಿಗೆ ಒಂದು ನ್ಯಾಯ ಅಲ್ಪ ಸಂಖ್ಯಾತರಿಗೆ ಒಂದು ನ್ಯಾಯ ಇರಕೂಡದು ಎಲ್ಲಾ ಧರ್ಮೀಯರಿಗೂ ಸಮಾನ ನಾಗರಿಕತೆ ಬೇಕು ಆದರೆ ಬಾಂಗ್ಲಾ, ಪಾಕಿಸ್ಥಾನದ ವಲಸಿಗರಿಗಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಪೇಜಾವರ ಶ್ರೀ ಹೇಳಿದ್ದಾರೆ

Related posts

Leave a Reply