Header Ads
Header Ads
Header Ads
Breaking News

ಪ್ರಜಾಪರಿವರ್ತನೆ ಪಾರ್ಟಿ ’ಬೆಂಗಳೂರು ಚಲೋ’ಗೆ ಜಿಲ್ಲೆಯಿಂದ 2 ಸಾವಿರ ಜನತೆ ಭಾಗಿ

 

ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಜಾ ಪರಿವರ್ತನಾ ಪಾರ್ಟಿ ಎಂಬ ಹೊಸ ರಾಜಕೀಯ ಪಕ್ಷವೊಂದು ಅಕ್ಟೋಬರ್ 9 ರಂದು ’ಬೆಂಗಳೂರು ಚಲೋ’ ಮೂಲಕ ಉದಯವಾಗಲಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ 2 ಸಾವಿರ ಮಂದಿ ಭಾಗವಹಿಸಲಿದ್ದಾರೆ. ಇದರಲ್ಲಿ ಪುತ್ತೂರಿನಿಂದ 700 ಮಂದಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಸಂಘಟನಾ ಜವಾಬ್ದಾರಿ ಹೊಂದಿರುವ ಕೊರಗಪ್ಪ ಈಶ್ವರಮಂಗಲ ತಿಳಿಸಿದರು.

ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸಾಮಾಜಿಕ ಪರಿವರ್ತನೆಯ ಮುಖಾಂತರ ಭ್ರಾತೃತ್ವದ ತಳಹದಿ ಮೇಲೆ ಶೋಷಣಾ ರಹಿತ ಆದರ್ಶ ರಾಷ್ಟ್ರ ನಿರ್ಮಾಣದ ಉದ್ದೇಶದಿಂದ ಪ್ರಜಾ ಪರಿವರ್ತನಾ ಪಕ್ಷ ಉದಯವಾಗಲಿದೆ ಎಂದವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಪ್ರಜಾ ಪರಿವರ್ತನಾ ಪಾರ್ಟಿಯ ಸಂಘಟನಾ ಜವಾಬ್ದಾರಿ ಹೊತ್ತ ಶೇಖರ ಮಾಡಾವು, ಸದಾಶಿವ ಬಾವಿಕಟ್ಟೆ, ಸದಾನಂದ ಪಾಣಾಜೆ ಹಾಗೂ ಗೋಪಾಲ ದರ್ಬೆತ್ತಡ್ಕ ಉಪಸ್ಥಿತರಿದ್ದರು.

ವರದಿ: ಅನೀಶ್ ಪುತ್ತೂರು

Related posts

Leave a Reply