Header Ads
Breaking News

ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಮೋದಿ ಮುಕ್ತ ಆಗಬೇಕು : ಉಡುಪಿಯಲ್ಲಿ ಎಮ್‌ಎಲ್‌ಸಿ ಭೋಜೇಗೌಡ ಹೇಳಿಕೆ

ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಈ ದೇಶ ಮೋದಿ ಮುಕ್ತ ಆಗಬೇಕು ಎಂದು ವಿಧಾನಪರಿಷತ್ ಸದಸ್ಯ ಭೋಜೇಗೌಡ ಅಭಿಪ್ರಾಯಪಟ್ಟಿದ್ದಾರೆ. ಉಡುಪಿಯ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೇಶದ ಸಾಂವಿಧಾನಿಕ ಸಂಸ್ಥೆಗಳಾದ ಸಿಬಿಐ, ಐಟಿ ಮುಂತಾದವುಗಳನ್ನು ಮೋದಿ ದುರುಪಯೋಗಪಡಿಸಿಕೊಂಡಷ್ಟು ಯಾವ ಪ್ರಧಾನಿಯೂ ದುರುಪಯೋಗಪಡಿಸಿಕೊಂಡಿಲ್ಲ ಎಂದು ಆರೋಪಿಸಿದ್ರು. ಇವತ್ತು ಮೋದಿಯವರು ಮಂಗಳೂರಿಗೆ ಬರುತ್ತಿದ್ದಾರೆ. ಮಂಗಳೂರಿಗೆ ಬರಲಿರುವ ಮೋದಿಯವರು ಉತ್ತರಿಸಬೇಕು, ಕರಾವಳಿಗೆ ನೀವು ಕೊಟ್ಟ ಕೊಡುಗೆ ಏನು? ದಕ್ಷಿಣ ಕನ್ನಡದ ಹಿರಿಯರು ಕಟ್ಟಿದ ವಿಜಯಾ ಬ್ಯಾಂಕ್‌ನ್ನು ಇವತ್ತು ಬೇರೆ ಬ್ಯಾಂಕ್‌ಗೆ ಧಾರೆ ಎರೆದದ್ದೇಕೆ? ಈ ಪ್ರಶ್ನೆಗಳಿಗೆ ಪ್ರಧಾನಿ ಮೋದಿಯವರು ಉತ್ತರಿಸಬೇಕು ಎಂದು ಸವಾಲು ಹಾಕಿದ್ರು. ಕಳೆದ ಬಾರಿ ಮೋದಿ ಅಲೆ ಇತ್ತು, ಆದರೆ ಈ ಬಾರಿ ಮೋದಿ ಅಲೆ ಇಲ್ಲ ಎಂದು ಹೇಳಿದ ಭೋಜೇಗೌಡ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿಯೇ ಇಲ್ಲ. ಕಡೇಪಕ್ಷ ಅವರ ಕ್ಷೇತ್ರದಲ್ಲಿ ಒಂದು ಮನೆ ಮಾಡುವ ಮನಸ್ಸನ್ನೂ ಶೋಭಾ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸ್ಥಳೀಯರು, ಜನರ ಸಮಸ್ಯೆಗೆ ಸ್ಪಂದಿಸುವವರು. ಹೀಗಾಗಿ ಪ್ರಮೋದ್ ಗೆಲ್ಲುವ ಮೂಲಕ ಉಡುಪಿ ಚಿಕ್ಕಮಗಳೂರು ಕ್ಷೇತ್ರ ಅಚ್ಚರಿಯ ಫಲಿತಾಂಶ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

Related posts

Leave a Reply

Your email address will not be published. Required fields are marked *