Header Ads
Breaking News

ಪ್ರತಿಭಟನಾಗಾರರ ಕಣ್ಣಿಗೆ ಮಣ್ಣೆರಚಿದ ನವಯುಗ್ ; ರಸ್ತೆಗೆ ಹಾಕಲಾದ ಡಾಮಾರು ಕೆಲವೇ ಗಂಟೆಗಳಿಗೆ ಸೀಮಿತಿ

ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಹೆದ್ದಾರಿ ಅವ್ಯವಸ್ಥೆ ವಿರುದ್ಧ ನಡೆಸಿದ ಪ್ರತಿಭಟನೆಗೆ ಬೆದರಿದ ಹೆದ್ದಾರಿ ಗುತ್ತಿಗೆ ಕಂಪನಿ ಪ್ರತಿಭಟನಾಗಾರರ ಕಣ್ಣಿಗೆ ಮಣ್ಣೇರಚಿದ್ದಾರೆಯೋ ಎಂಬಂತ್ತೆ ಇಲ್ಲದ ರಸ್ತೆಗೆ ಎರಚಲಾದ ಡಾಮಾರು ಕೆಲವೇ ಗಂಟೆಗಳಲ್ಲಿ ಎದ್ದು ಹೋಗಿ ಹೊಂಡ ಕಾಣಿಸಿಕೊಂಡಿದೆ.

ಎರ್ಮಾಳು ಪಡುಬಿದ್ರಿ ಗಡಿಭಾಗದಲ್ಲಿ ದಶಕಗಳ ಹಿಂದಿನಿಂದ ಆಮೆಗತಿಯಲ್ಲಿ ಸಾಗುತ್ತಿರುವ ಕಿರು ಸೇತುವೆ ಕಾಮಗಾರಿಯ ಹಿನ್ನಲೆಯಲ್ಲಿ ತಾತ್ಕಾಲಿಕ ಸಂಚಾರಕ್ಕೆ ನಿರ್ಮಾಣ ಮಾಡಿದ ರಸ್ತೆ ತನ್ನ ಮೂಲ ಸ್ವರೂಪ ಕಳೆದುಕೊಂಡು, ರಾಷ್ಟ್ರ ಮಟ್ಟದಲ್ಲಿ ಮಾನ ಹರಾಜಿಗಿಟ್ಟಂತಾಗಿತ್ತು. ತಡವಾಗಿಯಾದರೂ ವಿರೋಧ ಪಕ್ಷ ಕಾಂಗ್ರೆಸ್ ಎಚ್ಚೆತ್ತುಕೊಂಡು ಪ್ರತಿಭಟಿಸಿ ಹದಿನೈದು ದಿನಗಳ ಗಡುವು ನೀಡಿತ್ತು. ಗಡುವು ಹತ್ತಿರ ಬರುತ್ತಿದ್ದಂತೆ ಬೆದರಿದ ಕಂಪನಿ ನಾಮ್ಕಾವಸ್ಥೆಗೂ ಎಂಬಂತ್ತೆ ಇಲ್ಲದ ರಸ್ತೆಗೆ ರಾತ್ರಿ ಸಮಯ ಡಾಮಾರಿನ ಲೇಪ ಹಾಗಿದ್ದು ಮುಂಜಾನೆ ಮತ್ತೆ ಹೊಂಡ ಕಾಣಿಸಿಕೊಳ್ಳುವ ಮೂಲಕ ಗುತ್ತಿಗೆ ಕಂಪನಿ, ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬಗ್ಗೆ ಜನ ಸಂಶಯ ಪಡುವಂತ್ತಾಗಿದೆ ಎನ್ನುತ್ತಾರೆ ಹೆದ್ದಾರಿ ನಿತ್ಯ ಸಂಚಾರ ಶಂಕರ್ ಪೂಜಾರಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *