Header Ads
Header Ads
Breaking News

ಪ್ರತಿಭಟನಾ ಜಾಥಾದಲ್ಲಿ ಅವಾಚ್ಯ ಶಬ್ದದಿಂದ ನಿಂದನೆ ಖಂಡನೀಯ :ಯುಡಿಎಫ್ ನೇತಾರ ಉಮ್ಮರ್ ಬೋರ್ಕಳ ಆರೋಪ

ಮಂಜೇಶ್ವರದ ವರ್ಕಾಡಿ ಗ್ರಾಮ ಪಂಚಾಯತಿನ ಮೂರನೇ ವಾರ್ಡಿಗೊಳಪಡುವ ಕಲ್ಮಿಂಜ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯೆಂದು ಆರೋಪಿಸಿ ಆ ಪ್ರದೇಶದ ಕೆಲವು ಎಡರಂಗ ಬೆಂಬಲಿಗರು ಜನವರಿ 29ರಂದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾ ಜಾಥಾದಲ್ಲಿ ಯುಡಿಎಫ್ ಜನಪ್ರತಿನಿಧಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯವೆಂದು ಯುಡಿಎಫ್ ನೇತಾರ ಉಮ್ಮರ್ ಬೋರ್ಕಳ ಆರೋಪಿಸಿದ್ದಾರೆ.

ಅವರು ಮಂಜೇಶ್ವರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಯಾವುದೋ ವಿಷಯವನ್ನೆತ್ತಿಕೊಂಡು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟಿಸುವ ಜನರ ಹಕ್ಕನ್ನು ನಾವು ಗೌರವಿಸುತ್ತೇವೆ. ಅದರೆ ಸದ್ರಿ ಪ್ರತಿಭಟನೆಯ ಔಚಿತ್ಯವನ್ನು ನಾವು ಪ್ರಶ್ನಿಸುತ್ತೇವೆ. ತೀರಾ ರಾಜಕೀಯಪ್ರೇರಿತವಾಗಿ ನಡೆಸುವ ಸದ್ರಿ ನಿಂದನಾ ಜಾಥಾಗೆ ಎಲ್‌ಡಿಎಫ್‌ನ ಜವಾಬ್ದಾರಿಯುತ ನೇತಾರರು ನೇತೃತ್ವ ನೀಡಿರುವುದು ಅ ರಂಗವು ರಾಜಕೀಯವಾಗಿ ನೈತಿಕ ದಿವಾಳಿಕೋರತನ ಅನುಭವಿಸುತ್ತಿರುವುದಕ್ಕೆ ಉದಾಹರಣೆಯಾಗಿರುವುದಾಗಿ ಅವರು ಹೇಳಿದರು.

ಸುದ್ದಿ ಷ್ಠಿಯಲ್ಲಿ ಯುಡಿಎಫ್ ವರ್ಕಾಡಿ ಪಂಚಾಯತು ಸಮಿತಿ ಅಧ್ಯಕ್ಷ ಮೊಹಮ್ಮದ್ ಮಜಾಲು, ಸಂಚಾಲಕ ಟಿ.ಮೂಸಾ ತೌಡುಗೋಳಿ, ರೋನಿ.ಡಿ.ಸೋಜಾ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply