Header Ads
Header Ads
Header Ads
Breaking News

ಪ್ರತಿಭಾವಂತ ಯುವಕ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು ಮುಖ್ಯರಸ್ತೆಯಲ್ಲಿ ಎಸ್‌ಕೆಪಿ ಟ್ರೈನಿಂಗ್ ಸೆಂಟರ್ ನಡೆಸುತ್ತಿದ್ದ ಹಾಗೂ ಐಎಎಸ್ ಪರೀಕ್ಷೆಗೆ ಹಾಜರಾಗಿದ್ದ ಪ್ರತಿಭಾವಂತ ಯುವಕನೊಬ್ಬ ತನ್ನ ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಪುತ್ತೂರು ನಗರದ ಬೊಳುವಾರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಪ್ರಭಾಕರ ಆಚಾರಿ ಹಾಗೂ ಮಲ್ಲಿಕಾ ದಂಪತಿಗಳ ಪುತ್ರ ಸುದೇಶ್ ಆಚಾರಿ (33) ಎಂಬವರು ತನ್ನ ಮನೆಯ ಕೊಠಡಿಯಲ್ಲಿ ತಾಯಿಯ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಎಸ್‌ಕೆಪಿ ಎಂಬ ಸಂಸ್ಥೆ ಕಟ್ಟಿಕೊಂಡು ಯುವ ಜನತೆಗೆ ಶೈಕ್ಷಣಿಕ, ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಗಳನ್ನು ನೀಡುತ್ತಿದ್ದರು. ಇದರೊಂದಿಗೆ ಐಎಎಸ್ ಪರೀಕ್ಷೆಯನ್ನು ಕಟ್ಟಿ ಹಾಜರಾಗಿದ್ದರು. ಇದಕ್ಕಾಗಿ ತುಂಬಾ ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ. ಈ ನಡುವೆ ಯುವತಿಯೊಬ್ಬಳನ್ನು ಪ್ರೇಮಿಸಿದ್ದು, ಮದುವೆಯಾಗುವ ಬಗ್ಗೆಯೂ ಮನೆಯಲ್ಲಿ ತಂದೆಯೊಂದಿಗೆ ಮಾತನಾಡಿದ್ದರು. ಇದಕ್ಕೆ ಮನೆಯವರು ಸ್ಪಷ್ಟ ನಿರ್ಧಾರ ಸೂಚಿಸಿರಲಿಲ್ಲ ಎನ್ನಲಾಗಿದೆ. ಆದರೆ ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪುತ್ತೂರು ನಗರಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

Related posts

Leave a Reply