Header Ads
Header Ads
Breaking News

ಪ್ರತಿಯೊಬ್ಬರು ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ತೊಡಗಿಕೊಳ್ಳಿ ಪುತ್ತೂರಿನಲ್ಲಿ ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ ಹೇಳಿಕೆ

ಇತ್ತೀಚೆಗಿನ ದಿನಗಳಲ್ಲಿ ಭಾರತ ಕೇಂದ್ರಿತವಾದ ವಿಚಾರಧಾರೆಗಳು ಬೆಳೆಯಲಾರಂಭಿಸಿವೆ ನಮ್ಮ ಸ್ಥಳೀಯ ಪ್ರದೇಶಗಳ ಅಭಿವೃದ್ಧಿಗಾಗಿ ಶ್ರಮಿಸುವುದರ ಮುಖೇನ ಅಂತಿಮವಾಗಿ ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ತೊಡಗಬೇಕು ಎಂದು ನಾಗಾಲ್ಯಾಂಡ್‌ನ ರಾಜ್ಯಪಾಲ ಪಿ.ಬಿ.ಆಚಾರ್ಯ ಹೇಳಿದರು.

ಅವರು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ವಿವೇಕಾನಂದ ಜಯಂತಿ ಆಚರಣೆ, ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಉಚಿತ ತಾಂತ್ರಿಕ ತರಬೇತಿ ಹಾಗೂ ಗ್ರಾಮವಿಕಾಸ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ರಾಜ್ಯದಲ್ಲೂ ಆರ್ಥಿಕ ಶಕ್ತಿಗಳು ಅನಾವರಣಗೊಂಡಾಗ ದೇಶ ಸುಭದ್ರವಾಗುತ್ತದೆ. ದೇಶವನ್ನು ಪ್ರಾಪಂಚಿಕವಾದ ಶಕ್ತಿಯನ್ನಾಗಿಸುವ ಅಪೇಕ್ಷೆ ಹೊತ್ತವರು ಅನೇಕರು ಇಲ್ಲಿದ್ದಾರೆ. ಅವರನ್ನೆಲ್ಲ ಒಂದುಗೂಡಿಸುವ ಕಾರ್ಯ ಆಗಬೇಕಿದೆ ಎಂದು ನುಡಿದರು.

ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ,ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್, ವಿವೇಕಾನಂದ ಕಾಲೇಜಿನ ಸ್ಥಾಪಕ ಸಂಚಾಲಕ ಉರಿಮಜಲು ಕೆ ರಾಮ ಭಟ್ ಉಪಸ್ಥಿತರಿದ್ದರು.