Breaking News

ಪ್ರಧಾನಿ ಮೋದಿಯವರಿಂದ ಕೃಷಿ ಆಧಾರಿತ ಯೋಜನೆ,  ಮಂಗಳೂರು ಬಿಜೆಪಿ ಮಂಡಲ ಕಾರ್ಯಕಾರಿಣಿಯಲ್ಲಿ ಸಂಸದ ನಳಿನ್


ಭಾರತೀಯ ಜನತಾ ಪಾರ್ಟಿಯ ಮಂಗಳೂರು ನಗರ ಉತ್ತರ ಮಂಡಲ ಕಾರ್ಯಕಾರಿಣಿ ಸಭೆಯು ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಕಾರ್ಯಕಾರಿಣಿಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ನಳಿನ್‌ಕುಮಾರ್ ಕಟೀಲ್ ಪ್ರಧಾನಿ ನರೇಂದ್ರ ಮೋದಿಯ ಕೇಂದ್ರ ಸರ್ಕಾರ ಹಲವಾರು ಜನರಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಗೋ ಕಾಯ್ದೆಯನ್ನು ಜಾರಿಗೆ ತಂದಿದ್ದಲ್ಲದೆ ಕೃಷಿ ಆಧಾರಿತ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು. ಅನಂತರ ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಯಕಾರಿಣಿ ನಡೆಯುತ್ತಿದೆ. ಈ ಕಾರ್ಯಕಾರಿಣಿಗಳಲ್ಲಿ ಇಡೀ ಬೂತ್ ಮಟ್ಟದಲ್ಲಿ ಕೆಲವು ಆದೇಶಗಳನ್ನು ಕಾರ್ಯಗತಗೊಳಿಸುವುದು, ಅಲ್ಲದೆ ಈ ಕಾರ್ಯಕಾರಿಣಿ ಪಕ್ಷದ ಬಲವರ್ದನೆಗೊಳಿಸಲು ನಡೆಯುವಂತದ್ದು ಎಂದರು. ಈ ಸಂದರ್ಭ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್, ಡಾ. ಭರತ್ ಶೆಟ್ಟಿ, ಕಾರ್ಯದರ್ಶಿ ರಣದೀಪ್, ಶಶಿಕಲ, ಸುಧಾಕರ್ ಅಡ್ಯಾರ್, ಕಿಶೋರ್ ರೈ ಮತ್ತಿತ್ತರರು ಉಪಸ್ಥಿತರಿದ್ದರು.

Related posts

Leave a Reply