Header Ads
Breaking News

ಪ್ರಧಾನಿ ಮೋದಿಯವರು ನವಭಾರತ ನಿರ್ಮಾಣದ ಶಕ್ತಿ: ಶಾಸಕ ಸುನೀಲ್ ಕುಮಾರ್

ಬಂಟ್ವಾಳ: ಪ್ರಧಾನಿ ನರೇಂದ್ರಮೋದಿಯವರು ಒರ್ವವ್ಯಕ್ತಿಯಲ್ಲ, ಭವಿಷ್ಯದ ನವಭಾರತ ನಿರ್ಮಾಣದ ಶಕ್ತಿಯಾಗಿದ್ದಾರೆ ಎಂದು ದ.ಕ.ಜಿಲ್ಲಾ ಬಿಜೆಪಿ ಚುನಾವಣಾ ಉಸ್ತುವಾರಿ, ಶಾಸಕ ಸುನೀಲ್ ಕುಮಾರ್ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ್ದಾರೆ.

ಮಂಗಳವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರಿಗಿಂತ ವಯಸ್ಸಿನಲ್ಲಿ ಮೋದಿ ಹಿರಿಯರು, ಆದರೆ ನರೇಂದ್ರಮೋದಿಯವರು ಯುವಜನತೆಯ ಐಕಾನ್ ಆಗಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಈಗಾಗಲೇ ಬಿಡುಗಡೆಗೊಳಿಸಿರುವ ಪ್ರಣಾಳಿಕೆ ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿ ರಚಿಸಿರುವ ಜಂಟಿ ಪ್ರಣಾಳಿಕೆಯಾಗಿದೆ ಎಂದ ಟೀಕಿಸಿದ ಅವರು ಬಿಜೆಪಿ ದೇಶದ ಮುಂದಿನ ಭವಿಷ್ಯ ಮತ್ತು ರೈತ ಪರವಾದ ಪ್ರಣಾಳಿಕೆಯನ್ನು ಬಿಡುಗಡೆಮಾಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಯು.ರಾಜೇಶ್ ನಾಯ್ಕ್ ,ಸಹ ಪ್ರಭಾರಿ ಪ್ರತಾಪ್ ಸಿಂಹ ನಾಯಕ್,ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ,ಸಂಚಾಲಕ ಗೋಪಾಲಕೃಷ್ಣ ಹೇರಳೆ,ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ ಮತ್ತಿತರರು ಮಾಣಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *