Breaking News

ಪ್ರಧಾನಿ ಮೋದಿಯಿಂದ ಭರವಸೆಯ ಬಲೂನು, ಮೂರು ವರ್ಷದ ಸಾಧನೆ ಕೇವಲ ಕಳಪೆ ಐವನ್ ಡಿಸೋಝಾ ಆರೋಪ

ಬಣ್ಣ ಬಣ್ಣದ ಭರವಸೆಯ ಬಲೂನುಗಳನ್ನು ಜನರ ಕೈಗಿಡುತ್ತಾ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಮೂರು ವರ್ಷದ ಸಾಧನೆ ಕಳಪೆಯಾಗಿದೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಝಾ ಹೇಳಿದ್ದಾರೆ.
ಮಂಗಳೂರಿನಲ್ಲಿಂದು ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋರಕ್ಷಣೆ, ಗೋ ಭಕ್ಷಣೆಯ ಜೊತೆಗೆ ಉಡುಗೆ ತೊಡುಗೆ ವಿಚಾರದಲ್ಲಿ ರಾಜಕೀಯ ಮಾಡಿದ್ದೇ ಹೊರತು ಸಾಧನೆ ಏನೂ ಮಾಡಿಲ್ಲ. ಮೂರು ವರ್ಷದ ಆಡಳಿತ ಸಾಧನೆಯನ್ನು ಜನರ ಮುಂದಿಡಲು ಸಾಧ್ಯವಾಗದೆ, ಗೋವಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದವರು ಆರೋಪಿಸಿದರು.

Related posts

Leave a Reply