Header Ads
Breaking News

ಪ್ರಧಾನಿ ಮೋದಿಯ ಬಗ್ಗೆ ಅದಮಾರು ವಿಶ್ವಪ್ರಿಯ ತೀರ್ಥ ಶ್ರೀಗಳು ಹೇಳಿದ್ದೇನು ಗೋತ್ತೆ?

ಕೈಯಿ ಕಾಲು ಹಿಡಿಯುವ ಕಾಲ ಮುಗಿಯಿತು, ಇನ್ನು ಏನಿದ್ದರೂ ಪ್ರಾಮಾಣಿಕತೆಯ ಕಾಲ, ಯಾವುದೇ ವ್ಯಕ್ತಿಯಲ್ಲಿ ಪ್ರಾಮಾಣಿಕತೆ ಇದ್ದರೆ ಎಂಥಹ ಪಕ್ಷಗಳನ್ನು ಕೂಡಾ ನಿರ್ಣಮ ಮಾಡಲು ಸಾಧ್ಯ ಎಂಬುದಾಗಿ ಒರ್ವ ವ್ಯಕ್ತಿ ದೇಶಕ್ಕೆ ಮಾತ್ರವಲ್ಲ ಪ್ರಪಂಚಕ್ಕೆ ತೋರಿಸಿದ್ದಾರೆ, ಎಂಬುದಾಗಿ ಮೋದಿ ಗುಣಗಾನ ಮಾಡಿದ ಅದಮಾರು ವಿಶ್ವಪ್ರೀಯ ತೀರ್ಥ ಶ್ರೀಗಳು, ವಿದ್ಯಾರ್ಥಿಗಳು ಆ ವ್ಯಕ್ತಿಯ ಗುಣವನ್ನು ಮೈಗೂಡಿಸಿ ಕೊಳ್ಳಲು ಕರೆ ನೀಡಿದ್ದಾರೆ.

ಅದಮಾರು ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜು ವಿಭಾಗದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಆರಂಭದಲ್ಲಿ ಶ್ರೀಗಳು ಸಹಿತ ಇತರೆ ಗಣ್ಯರನ್ನು ಅದ್ಧೂರಿಯಾಗಿ ಮರೆವಣಿಗೆಯ ಮೂಲಕ ಕರೆತರಲಾಯಿತು. ಆ ಬಳಿಕ ವಿದ್ಯಾಸಂಸ್ಥೆಯ ನೂತನ ಸ್ಕೂಲ್ ಬಸ್ ಕೀಯನ್ನು ಶ್ರೀಗಳು ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್‌ರವರಿಗೆ ಹಸ್ತಾಂತರಿಸಿದರು. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಚೆಕ್ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಅರ್ಪಣೆಯನ್ನು ಶ್ರೀಗಳು ನೆರವೇರಿಸಿದರು. ಈ ಸಂದರ್ಭ ಮುಖ್ಯ ಅಥಿತಿಗಳಾಗಿ ಈಶ ಪ್ರೀಯತೀರ್ಥ ಶ್ರೀಗಳು, ಕಲ್ಲಡ್ಕ ಪ್ರಭಾಕರ್ ಭಟ್, ಕುದಿ ವಸಂತ ಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕೆ. ಶ್ರೀಹರಿ, ಪ್ರಾಂಶುಪಾಲ ಎಂ. ರಾಮಕೃಷ್ಣ ಪೈ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *