Header Ads
Breaking News

ಪ್ರಬುದ್ಧ ನಾಗರೀಕತೆಯತ್ತ ಹೊಸ ವರ್ಷದ ಚಿತ್ತ

ಉಜಿರೆ: ಸಾಮಾಜಿಕ ಹೊಣೆಗಾರಿಕೆಗೆ ಬದ್ಧರಾಗಿರುತ್ತೇವೆ ಹಾಗೂ ಪ್ರಜ್ಞಾವಂತ ನಾಗರೀಕರಾಗಿ ದೇಶ ಸೇವೆಯಲ್ಲಿ ತೊಡಗುತ್ತೇವೆ ಎಂದು ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳು ವಿನೂತನ ರೀತಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದರು.ಜಲ ಸಂರಕ್ಷಣೆ, ವಿದ್ಯುತ್ ಸಂರಕ್ಷಣೆ, ಆಹಾರ ಸಂರಕ್ಷಣೆ, ನಾಗರೀಕ ಪ್ರಜ್ಞೆಗಳ ವೃದ್ಧಿ ಮತ್ತು ವ್ಯಸನ ಹಾಗೂ ಇತ್ಯಾದಿ ದುಷ್ಚಟಗಳಿಂದ ಮುಕ್ತರಾಗುತ್ತೇವೆ ಎಂದು ಕಾಲೇಜಿನ ಸುಮಾರು ೨೫೦೦ ವಿದ್ಯಾರ್ಥಿಗಳು ಎಸ್.ಡಿ.ಎಂ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಸೀರೀಸ್‌ನ ಅಡಿಯಲ್ಲಿ ಬುಧುವಾರ ಬೆಳಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಕಾಲೇಜಿನ ಆವರಣದಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅತ್ಯಾಕರ್ಷಕವಾದ ಹೂವಿನ ರಂಗೋಲಿ ಪ್ರಧ್ಯಾಪಕರು, ವಿದ್ಯಾರ್ಥಿಗಳಿಗೆ ನಲ್ಮೆಯ ಸ್ವಾಗತ ನೀಡಿತು. ಇಡೀ ಸಮಾರಂಭದ ಕೇಂದ್ರ ಬಿಂದುವಾಗಿ ಹಲವು ವಿದ್ಯಾರ್ಥಿಗಳ ವಿವಿಧ ರೀತಿಯ ಕಣ್ಮನ ಸೆಳೆಯುವ ಕಾರ್ಟೂನ್ ಬೊಂಬೆಗಳನ್ನು ಧರಿಸಿ, ಹೊಸ ವರ್ಷದ ದಿನ ಕಾಲೇಜಿಗೆ ಆಗಮಿಸಿದ ಎಲ್ಲರ ಮೊಗದಲ್ಲೂ ಖುಷಿ ಮೂಡುವ ರೀತಿಯಲ್ಲಿ ಸ್ವಾಗತಿಸಿದರು.ಪದವಿ ಕಾಲೇಜು ಮಾತ್ರವಲ್ಲದೆ ಎಸ್.ಡಿ.ಎಂ ಕನ್ನಡ ಮಾಧ್ಯಮ ಶಾಲೆ, ಆಂಗ್ಲ ಮಾಧ್ಯಮ ಶಾಲೆ ಹಾಗೂ ಸಿ.ಬಿ.ಎಸ್.ಸಿ ಶಾಲೆಗಳ ವಿದ್ಯಾರ್ಥಿಗಳು ಸಹ ಸಾಮಾಜಿಕ ಬದ್ಧತೆಗಳ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಅಲ್ಲದೇ ಕಾರ್ಟೂನ್ ಬೊಂಬೆಗಳನ್ನು ಮಕ್ಕಳು ಕಣ್ತುಂಬಿಕೊಂಡು ಕುಣಿದು ಕುಪ್ಪಳಿಸಿದ ರೀತಿ ಮಕ್ಕಳ ಮುಗ್ಧತೆಗೆ ಸಾಕ್ಷಿಯಾಯಿತು.

ಪದವಿ ಕಾಲೇಜಿನ ಅವರಣದಲ್ಲಿ ವಿದ್ಯಾರ್ಥಿಗಳಿಗೆ ಅವರ 2019ರ ಸಿಹಿ ಕಹಿ ಅನುಭವಗಳನ್ನು ಹಂಚಿಕೊಳ್ಳಲು ವಿಶೇಷ ರೀತಿಯ ಬರಹದ ವ್ಯವಸ್ಥೆ ಮಾಡಲಾಗಿದ್ದು ವಿದ್ಯಾರ್ಥಿಗಳು ತಮ್ಮ ಮನದಾಳದ ಮಾತುಗಳನ್ನು ಹಾಳೆಯ ಮೇಲೆ ಅಚ್ಚಾಗಿಸಿದರು.ಇದೇ ಸಂದರ್ಭದಲ್ಲಿ 2019ರ ಕಾಲೇಜಿನ ಸಾಧನೆಗಳು ಹಾಗೂ ಪ್ರಮುಖ ಮೈಲುಗಲ್ಲುಗಳನ್ನು ಕುರಿತ ವಿಶೇಷ ಬಿತ್ತಿ ಪತ್ರಿಕೆಯನ್ನು ಹೊರತರಲಾಯಿತಯು. ಹೊಸ ವರ್ಷ ಆಚರಣೆಯು ಇಂದು ಹಲವೆಡೆ ಮೋಜು-ಮಸ್ತಿಗೆ ಮಾತ್ರ ಸೀಮಿತವಾಗಿದ್ದರೆ ಶ್ರೀ.ಧ.ಮಂ. ಕಾಲೇಜು ವಿನೂತನ ಹಾಗೂ ಅರ್ಥಪೂರ್ಣ ರೀತಿಯ ಹೊಸ ವರ್ಷಾಚರಣೆಗೆ ಸಾಕ್ಷಿಯಾಗಲು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಪಕರು ಉತ್ಸುಕತೆಯಿಂದ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *