Header Ads
Breaking News

ಪ್ರಯಾಣ, ಓದಿನಿಂದ ಮಾತ್ರ ಜೀವಪರ ಕಾಳಜಿಯ ಸಿನೆಮಾ ಸಾಧ್ಯ : ಯೋಗರಾಜ್ ಭಟ್

ಉತ್ತಮ ಓದು ಹಾಗು ನಿರಂತರ ಪ್ರಯಾಣ ಒಬ್ಬ ಸಿನೆಮಾ ಬರಹಗಾರನಿಗೆ ಅತೀ ಮುಖ್ಯ. ಹೆಚ್ಚು, ಹೆಚ್ಚು ಇದರಲ್ಲಿ ತೊಡಗಿಸಿಕೊಂಡವರಿಗೆ ಜೀವಪರ ಕಾಳಜಿ ಇರುವಂತಹ ಉತ್ತಮ ಸಿನೆಮಾಗಳನ್ನು ರಚಿಸಲು ಸಾಧ್ಯ ಎಂದು ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಹೇಳಿದರು.

ಇತ್ತೀಚೆಗೆ ಎಸ್.ಡಿ.ಎಂ ಬಿವೋಕ್ ದಿಜಿಟಲ್ ಮೀಡೀಯಾ ಹಾಗೂ ಫಿಲ್ಮ್ ಮೇಕಿಂಗ್ ವಿದ್ಯಾರ್ಥಿಗಳೊಂದಿಗೆ ಸಂಸೆಯಲ್ಲಿ ನಡೆಸಿದ ಸಂವಾದದಲ್ಲಿ ಅವರು ಮಾತನಾಡುತಾ, ಇವತ್ತಿನ ಯುವಕರು ಸಿನೆಮಾಗಳನ್ನು ನೋಡಿ, ಸಿನೆಮಾ ಮಾಡಲು ಮುಂದಾಗುತ್ತಾರೆ, ಆದರೆ ಅದು ಸರಿಯಾದ ರೀತಿಯಲ್ಲ ಬದಲಾಗಿ ಸಿನೆಮಾವನ್ನು ಚೆನ್ನಾಗಿ ಅರಿತು ಸಿನೆಮಾ ಮಾಡಬೇಕು ಆಗ ಮಾತ್ರ ಉತ್ತಮ ಚಿತ್ರಗಳು ಬರಲು ಸಾಧ್ಯ ಎಂದರು.

ಉಜಿರೆಯ ಎಸ್.ಡಿ.ಎಂನ ಬಿವೋಕ್ ದಿಜಿಟಲ್ ಮೀಡೀಯಾ ಹಾಗೂ ಫಿಲ್ಮ್ ಮೇಕಿಂಗ್ ವಿದ್ಯಾರ್ಥಿಗಳಿಗೆ ಸಿನೆಮಾದ ಪ್ರಯೋಗಿಕ ಕಲಿಕೆಗಳಿಗೆ ಹೆಚ್ಚು ಒತ್ತುಕೊಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಯೋಗರಾಜ್ ಭಟ್ ನಿರ್ದೇಶಿಸುತ್ತಿತುವ ಗಾಳಿಪಠ-2 ಚಿತ್ರದ ಹೊರಾಂಗಣ ಚಿತ್ರೀಕರಣ ಘಟಕಕ್ಕೆ ಭೇಟಿ ಮಾಡಿಸಲಾಯಿತು.

ಸಂಸೆ ಹಾಗು ಕುದುರೆಮುಖ ಪರಿಸರದಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ಎರಡು ದಿನ ಪಾಲ್ಗೊಂಡ ವಿದ್ಯಾರ್ಥಿಗಳು ಸಿನೆಮಾದ ವಿವಿಧ ಘಟಕಗಳನ್ನು ಅಧ್ಯಯನ ಮಾಡಿದರು. ಜೊತೆಗೆ ಬಹು ನೀರಿಕ್ಷಿತ ಗಾಳಿಪಠ-2 ಚಿತ್ರದ ಕೆಲವು ದೃಶ್ಯಗಳ ಅಭಿನಯದಲ್ಲಿ ಪಾಲ್ಗೊಂಡರು. ಈ ಸಂಧರ್ಬದಲ್ಲಿ ಬಿವೋಕ್ ದಿಜಿಟಲ್ ಮೀಡೀಯಾ ಹಾಗೂ ಫಿಲ್ಮ್ ಮೇಕಿಂಗ್‌ನ ಉಪನ್ಯಾಸಕರಾದ ಮಾಧವ ಹೊಳ್ಳ, ಅಶ್ವಿನಿ ಜೈನ್, ಕೃಷ್ಣಪ್ರಶಾಂತ ಜೊತೆಗಿದ್ದರು.

Related posts

Leave a Reply

Your email address will not be published. Required fields are marked *